ಕಿಚ್ಚ ಸುದೀಪ್ ರವರಿಂದ First Look ರಿಲೀಸ್

0
238

ರಾಕಿನ್ ಪ್ರೊಡಕ್ಷನ್ ಬ್ಯಾನರ್‍ ನಲ್ಲಿ ಶಬೀನ ಆರ್ ನಿರ್ಮಾಣ ಮಾಡುತ್ತಿರುವ ಚಡ್ಡಿದೋಸ್ತ್, ಕಡ್ಡಿಅಲ್ಲಾಡುಸ್ಬುಟ್ಟಾ ಚಿತ್ರದ ಫಸ್ಟ್ ಲುಕ್‍ನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಬಿಡುಗಡೆ ಮಾಡಿದರು.ಕಾರ್ಯಕ್ರಮಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಕಾರ್ಯದರ್ಶಿಗಳಾದ ಭಾ ಮ ಹರೀಶ್, ಭಾ ಮ ಗೀರೀಶ್‍ರವರು & ನಿರ್ಮಾಪಕರಾದ ಅವಿನಾಶ್ ಶೆಟ್ಟಿ ಮುಂತಾದವರು ಭಾಗವಹಿಸಿದರು.

ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆಯಿರುವ ಈ ಚಿತ್ರದ ನಾಯಕರಾಗಿ ಆಸ್ಕರ್ ಕೃಷ್ಣ ಮತ್ತು ಲೋಕೇಂದ್ರ ಸೂರ್ಯ ನಟಿಸುತ್ತಿದ್ದಾರೆ. ಆಸ್ಕರ್ ಕೃಷ್ಣರವರು ನಟನೆಯ ಜೊತೆಗೆ ಚಿತ್ರದ ನಿರ್ದೇಶನವನ್ನು ಮಾಡುತ್ತಿದ್ದಾರೆ. ಚಿತ್ರಕ್ಕೆ ಆನಂತು ರವರ ಸಂಗೀತ, ವಿನಯ್ ಗೌಡ ಛಾಯಗ್ರಹಣ, ಎ ಆರ್ ಕೃಷ್ಣಕುಮಾರ್ ಸಂಕಲನವಿದೆ. ಚಿತ್ರಕ್ಕೆ ಲೋಕೇಂದ್ರ ಸೂರ್ಯ ರವರು ಚಿತ್ರಕಥೆ-ಸಂಭಾಷಣೆ ಬರೆದಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here