ಆರೋಹಣ ಸಿನಿಮಾಗೆ ಅನುರಾಧ ಭಟ್ ರವರ ದನಿ…

0
2139

ಮಲ್ಲಿಕಾರ್ಜುನ್ ಪ್ರೊಡಕ್ಷನ್ ಲಾಂಛನದಲ್ಲಿ ಮೂಡಿಬರುತ್ತಿರುವ ಆರೋಹಣ ಚಿತ್ರದ ಹಾಡಿಗೆ ಅನುರಾಧ ಭಟ್ ರವರು 2 ಹಾಡಿಗೆ ದನಿಯಾಗಿದ್ದಾರೆ. ಪ್ರೇಮ ಕವಿ ಕೆ.ಕಲ್ಯಾಣ್‍ರವರು ಹಾಡುಗಳನ್ನು ಬರೆದಿದ್ದಾರೆ… “ಸ್ವೀಕರಿಸು ಹೃದಯ ಸ್ವೀಕರಿಸೂ ನನ್ನ ಹೃದಯದಲೀ ಮತ್ತೇ ಮರುಕಳಿಸೂ”… ಈ ಹಾಡನು ಅನುರಾಧ ಭಟ್ಟ್ ರವರು ಹಾಡಿದ್ದಾರೆ.
ಸುಶೀಲ್ ಕುಮಾರ್ ಚಿತ್ರದ ನಿರ್ಮಾಣದ ಜೊತೆಗೆ ನಾಯಕರಾಗಿದ್ದಾರೆ ಮತ್ತೊಬ್ಬ ನಾಯಕನಾಗಿ ರೋಹಿತ್ ಶೆಟ್ಟಿ ನಟಿಸಿದ್ದಾರೆ ನಾಯಕಿಯಾಗಿ ಪ್ರೀತಿ ಅಭಿನಯಿಸಿದ್ದಾರೆ. ನಿರ್ದೇಶನ ಶ್ರೀಧರ್ ಶೆಟ್ಟಿ ಕಥೆ,ಚಿತ್ರಕಥೆ,ಸಂಭಾಷಣೆ ಮತ್ತು ಒಂದು ಹಾಡಿಗೆ ಸಾಹಿತ್ಯವನ್ನು ಬರೆದಿದ್ದಾರೆ.
ಹಳ್ಳಿಯಲ್ಲಿ ನಡೆಯುವ ರಾಜಕೀಯ, ತಂದೆ-ಮಗನ ಬಾಂದವ್ಯದ ಜೊತೆಗೆ ತ್ರಿಕೋನ ಪ್ರೇಮ ಕಥೆಯ ಚಿತ್ರವಾಗಿದೆಯಂತೆ. ಬೆಂಗಳೂರಿನ ಸುತ್ತ ಮುತ್ತಲ ಪ್ರದೇಶದಲ್ಲಿ ಚಿತ್ರೀಕರಣವಾಗಿದು, ಕೆ. ವೈ. ಶಿವಪುತ್ರ ಛಾಯಗ್ರಹಣ, ಉತ್ತಮ ರಾಜ್ ಸಂಗೀತ, ದುರ್ಗಾ ಪಿ. ಎಸ್. ಸಂಕಲನ ಚಿತ್ರಕ್ಕಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here