ಉಡುಂಬಾ ಯಶಸ್ವಿಯಾಗಿ 25

0
270

ಶ್ರೀ ಚಂದ್ರ ಪ್ರೊಡಕ್ಷನ್ ಬ್ಯಾನರ್ ನಲ್ಲಿ ನಿರ್ಮಾಣವಾಗಿರುವ ಉಡುಂಬಾ ಚಿತ್ರವು ಯಶಸ್ವಿಯಾಗಿ 25 ದಿನ ಪೊರೈಸಿದ್ದು ಚಿತ್ರದ Success ಯಿಂದ ಚಿತ್ರತಂಡ ತುಂಬಾ ಖುಷಿಯಾಗಿದೆ. ಪವನ್ ಶೌರ್ಯ ನಾಯಕನಾಗಿ ಚಿರಶ್ರೀ ಅಂಚನ್ ನಾಯಕಿಯಾಗಿ ನಟಿಸಿರುವ ಈ ಸಿನಿಮಾವನ್ನು ಶಿವರಾಜ್‍ರವರು ನಿರ್ದೇಶನ ಮಾಡಿದ್ದಾರೆ.

ಕರಾವಳಿ ತೀರದಲ್ಲಿ ಬೆಸ್ತರ ಹುಡುಗನೊಬ್ಬನ ಸಾಹಸದ ಕಥೆ ಈ ಚಿತ್ರದಲ್ಲಿದೆ. ಪವನ್ ಶೌರ್ಯ ಅವರು ಈ ಚಿತ್ರಕ್ಕಾಗಿ ಸಿಕ್ಸ್ ಪ್ಯಾಕ್ ಮಾಡಿಕೊಂಡಿದ್ದರು. ಚಿತ್ರಕ್ಕೆ ವಿನೀತ್‍ರಾಜ್ ಮೆನನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರವನ್ನು ಹನುಮಂತ ರಾವ್-ವೆಂಕಟ್ ಶಿವರೆಡ್ಡಿ ನಿರ್ಮಾಣದ ಜೊತೆ ಮಹೇಶ್ ಅವರು ಸಹ ನಿರ್ಮಾಪಕರಾಗಿದ್ದಾರೆ. ಪ್ರಮುಖ ಪಾತ್ರದಲ್ಲಿ ಶರತ್ ಲೋಹಿತಾಶ್ವ, ಸಯ್ಯದ್ ಇರ್ಫಾನ್ ಮುಂತಾದವರು ಅಭಿನಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here