ಒಲವೇ ಮಂದಾರ-2 ಚಿತ್ರೀಕರಣದಲ್ಲಿ…

0
1373

ಇದೀಗ ಬಂದ ಸುದ್ದಿ ಚಿತ್ರ ನಿರ್ದೇಶನ ಮಾಡಿ ಗಮನ ಸೆಳೆದಿದ್ದ ಎಸ್ ಆರ್ ಪಾಟೇಲ್ ಅವರು ಈಗ ಮುತ್ತಿನಂಥ ಪ್ರೇಮ ಕಥೆ ಇರುವ ಒಲವೇ ಮಂದಾರ-2 ಎಂಬ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವನ್ನು ಬಸವ ಕಂಬೈನ್ಸ್ ಬ್ಯಾನರ್ ನಲ್ಲಿ ಚೇತನ್ ರಾಜ್, ರಮೇಶ್ ಮಾರ್ಗಲ್ ಮತ್ತು ಟಿ ಎಂ ಸತೀಶ್ ರವರು ಸೇರಿ ನಿರ್ಮಾಣ ಮಾಡುತ್ತಿದ್ದಾರೆ.
ಸದ್ಯಕ್ಕೆ ಚಿತ್ರದ ಚಿತ್ರೀಕರಣವು ನಡೆಯುತ್ತಿದ್ದು ನಾಯಕನಾಗಿ ಸನತ್ ನಟಿಸುತ್ತಿದ್ದಾರೆ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು ಅವರಲ್ಲಿ ಪ್ರಜ್ಞಾಭಟ್ ನಟಿಸುತ್ತಿದ್ದು ಮತ್ತೊಂಬ್ಬ ನಾಯಕಿಯ ಆಯ್ಕೆ ನಡೆಯುತ್ತಿದೆ ಇನ್ನೂ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಡಿಂಗ್ರಿನಾಗರಾಜ್, ಚಿತ್‍ಕಲಾ ಬೀರದರ್ & ಕಾಮಿಡಿ ಕಿಲಾಡಿ ಶಿವಾನಂದ ನಟಿಸುತ್ತಿದ್ದಾರೆ.ಒಲವೇ ಮಂದಾರ -2 ಚಿತ್ರಕ್ಕೆ ಪಾಟೀಲ್‍ರವರು ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ 5 ಹಾಡುಗಳಿದ್ದು ಡಾ.ಕಿರಣ್ ತೋಟಂಬೈಲ್ ಸಂಗೀತ ನೀಡುತ್ತಿದ್ದಾರೆ ಹಾಗೂ ತನ್ವಿಕ್ G ಅವರ ಛಾಯಗ್ರಹಣ ಚಿತ್ರಕ್ಕಿದೆ. ಕನಕಪುರ, ರಾಮನಗರ, ಮಂಡ್ಯ ಮತ್ತು ಬೆಂಗಳೂರು ಮುಂತಾದ ಸ್ಥಳಗಳಲ್ಲಿ ಚಿತ್ರೀಕರಣ ನಡೆಯುತ್ತದೆ.
                         ಎಸ್ ಆರ್ ಪಾಟೇಲ್

                                   ಸನತ್

                                ಪ್ರಜ್ಞಾಭಟ್

                     ಡಾ.ಕಿರಣ್ ತೋಟಂಬೈಲ್

                                    ತನ್ವಿಕ್ G

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here