ಪಕ್ಕ ಕಾಮಿಡಿಯ ಸಿನಿಮಾ ಹಳ್ಳಿ ಹೈಕ್ಳ ಪ್ಯಾಟೆ ಲೈಫು

0
625

ಸುದೀಪ್‍ರಾಜ್ ಪ್ರೊಡಕ್ಷನ್‍ನಲ್ಲಿ ಮೋಹನ್ ಕುಮಾರಿ ಮತ್ತು ಲಕ್ಷ್ಮೀನಾರಾಯಣ ನಿರ್ಮಾಣ ಮಾಡಿರುವ ಹಳ್ಳಿ ಹೈಕ್ಳ ಪ್ಯಾಟೆ ಲೈಫು ಚಿತ್ರದ ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು, ಆಡಿಯೋ ರಿಲೀಸ್ ಮಾಡಲು ಚಿತ್ರತಂಡ ತಯಾರಾಗುತ್ತಿದೆ. ಚಿತ್ರವು ಕಾಮಿಡಿಯಿಂದ ಕೂಡಿದ್ದು ನೋಡುಗರಿಗೆ ಬೋರ್ ಆಗುವುದಿಲ್ಲವಂತೆ.

ಚಿತ್ರದ ಕಥೆಯನ್ನು ರಾಜಶೇಖರ್ ಅವರು ಬರೆದಿದ್ದು,  ಚಿತ್ರವನ್ನು ಮಂಜು ಗಂಗಾವತಿ ನಿರ್ದೇಶನ ಮಾಡಿದ್ದಾರೆ. ಇವರು ನಿರ್ದೇಶಕ ಆಗುವ ಮೊದಲು ಆಫೀಸ್ ಬಾಯ್ ಆಗಿ ಬಿಡುವಿನ ಸಮಯದಲ್ಲಿ ಆಕೆಸ್ಟ್ರದಲ್ಲಿ ಮೇಕಪ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದು ನಂತರ ನಿರ್ದೇಶಕರಾಗ ಬೇಕೆಂದು ಮಾ.ಆನಂದ್ ಎ ಜಿ ಶೇಷಾದ್ರಿ ಆದರ್ಶ್ ಹೆಗ್ಡೆ, ಅರವಿಂದ್ ಕೌಶಿಕ್ ಪೃಥ್ವಿ ರಾಜ್ ಕುಲಕರ್ಣಿ ವಿನು ಬಳಂಜ ಜೊತೆಗೆ ಸಹಾಯಕ ನಿರ್ದೇಶಕರಾಗಿ ಮತ್ತು ಪ್ರೀತಂ ಶೆಟ್ಟಿ ಅವರ ಜೊತೆಗೆ ಸಂಚಿಕೆ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ಚಿತ್ರದ ಬಗ್ಗೆ ನಿರ್ದೇಶಕರು “ಮೂರು ಜನ ಹುಡುಗರು ವಿದ್ಯಾಭ್ಯಾಸ ಮುಗಿಸಿ ಸಿಟಿ ಆಸೆಗೆ ತಂದೆ-ತಾಯಿಗಳ ವಿರೋಧ ಒತ್ತಾಯಕ್ಕೆ ಮದುವೆಯಾಗಿ ಕೆಲಸಕ್ಕಾಗಿ ಬೆಂಗಳೂರಿಗೆ ಬಂದು ಆಫೀಸ್ ನಲ್ಲಿ ಜೊತೆಗೆ ಕೆಲಸ ಮಾಡುವ ಹುಡುಗಿಯರಿಂದೆ ಬಿದ್ದು ಮಜಾ ಮಾಡುತ್ತಿರುತ್ತಾರೆ. ಹುಡುಗಿಯರ ಹಿಂದೆ ಬಿದ್ದು ಹಾಳಗುತ್ತಾರ? ಊರಿನಲ್ಲಿರುವ ಆ ಹೆಂಡ್ತಿರು ಏನು ಮಾಡುತ್ತಾರೆ..?  ಈ ಮೂರು ಹುಡುಗರ ಕಥೆಯ ಜೊತೆಗೆ ರಾಜೀವ ಎಂಬಾತ ವಿದೇಶದಿಂದ ಹಳ್ಳಿಗೆ ಬಂದು ವ್ಯವಸಾಯ ಮಾಡಿ “ಬೆಸ್ಟ್ ರೈತ” ಎಂದು ಆವಾರ್ಡ್ ಪಡೆಯುತ್ತಾನೆ. ರಾಜೀವನ ನೋಡಿ ಈ ಮೂರು ಹುಡುಗರು ಕೊನೆಗೆ ಏನು ಮಾಡುತ್ತಾರೆ…? ಎಂಬುದೇ ಚಿತ್ರದ ಕಥೆಯಾಗಿದೆ. ಚಿತ್ರವು ಕಾಮಿಡಿಯಿಂದ ಮೂಡಿಬಂದಿದ್ದು ಜೊತೆಗೆ ಈಗಿನ ರೈತರ ಸಮಸ್ಯೆಗಳಿಗೆ ಪರಿಹಾರ ಚಿತ್ರದಲ್ಲಿ ನೋಡಬಹುದು”ಎಂದು ಹೇಳಿದರು.

ಚಿತ್ರದ ನಾಯಕರಾಗಿ ಕಾಮಿಡಿ ಕಿಲಾಡಿ ಸೆಕೆಂಡ್ ಸಿಸನ್ಸ್ ವಿನ್ನರ್ ಮಡನೂರು ಮನು, ಮಜಾಭಾರತ ಜಗ್ಗಪ್ಪ,ರಘು, ತ್ರಿವಿಕ್ರಮ, ಇವರ ಜೊತೆ ವರ್ಷಿತ,ಕಾಮಿಡಿ ಕಿಲಾಡಿ ಮಿಂಚು, ಹಿಮ ಮೋಹನ್, ಶರಣ್ಯ ಗೌಡ ನಟಿಸಿದ್ದಾರೆ. ಸಕಲೇಶಪುರ, ಹಾಸನ, ಮಂಡ್ಯ, ಮೈಸೂರು, ಬೆಂಗಳೂರು, ರಾಮನಗರ ಸುತ್ತಮುತ್ತ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಯುಗಂತ್ ಸಂಗೀತ ನೀಡಿದ್ದಾರೆ. ವಿಜಯ ಪ್ರಕಾಶ್, ಶಶಾಂಕ್ ಶೇಷಗಿರಿ, ಸಂತೋಷ್ ವೆಂಕಿ, ಅನುರಾಧ ಭಟ್ ಹಾಡುಗಳನ್ನು ಹಾಡಿದ್ದಾರೆ. ನಾಗರಾಜ್ ಮೂರ್ತಿ ಛಾಯಗ್ರಹಣ, ಸಂಜೀವ್ ರೆಡ್ಡಿ ಸಂಕಲನ ಚಿತ್ರಕ್ಕಿದೆ.

ಮಂಜು ಗಂಗಾವತಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here