ಕುತೂಹಲ ಇರುವ ಕಡಲ ತೀರದ ಭಾರ್ಗವ

0
666

ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಪನ್ನಾಗ ಸೋಮಶೇಖರ್ ಎಂಬ ಯುವ ನಿರ್ದೇಶಕ ಕಡಲ ತೀರದ ಭಾರ್ಗವ ಸಿನಿಮಾಗೆ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇವಕಲಾ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದೆ.

ಚಿತ್ರದ ಟ್ರೈಲರ್ ನೋಡಿದ್ದಾರೆ ಚಿತ್ರದ ಮೇಲೆ ಕುತೂಹಲ ಮೂಡುತ್ತದೆ. “ಸೈಕಲಾಜೀಕಲ್, ಸಸ್ಪೆನ್ಸ್, ಥ್ರಿಲ್ಲರ್ ಇರುವ ಈ ಚಿತ್ರದಲ್ಲಿ ಐದು ಪ್ರಮುಖ ಪಾತ್ರಗಳ ಸುತ್ತ ಚಿತ್ರದ ಕಥೆಯು ನಡೆಯಲ್ಲಿದ್ದು”, ಚಿತ್ರದಲ್ಲಿ ಭರತ್ ಗೌಡ, ಬಿಗ್ ಬಾಸ್ ಖ್ಯಾತಿಯ ಶೃತಿ ಪ್ರಕಾಶ್, ವರುಣ್ ರಾಜ್, ರಾಘವ್ ನಾಗ್ ಮತ್ತು ಶ್ರೀಧರ್ ಕೆ ಎಸ್ ನಟಿಸಿದ್ದಾರೆ. ಚಿತ್ರದಲ್ಲಿ ಎಂಟು ಹಾಡುಗಳಿದ್ದು, ಅನಿಲ್ ಸಿ ಜೆ ಸಂಗೀತ ನೀಡಿದ್ದಾರೆ. ಕೀರ್ತನ್ ಪೂಜಾರಿ ಛಾಯಗ್ರಹಣ, ಅಶಿಕ್ ಅವರ ಸಂಕಲನ ಚಿತ್ರಕ್ಕಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here