ಕೌರ್ಯ ಚಿತ್ರತಂಡದಿಂದ ಶಂಕರ್ ನಾಗ್ ಅವರ ಹುಟ್ಟುಹಬ್ಬ ಆಚರಣೆ

0
319

ಅವರ್ ಗ್ಲಾಸ್ ಪ್ರೊಡಕ್ಷನ್‍ಲ್ಲಿ ತಯಾರಾಗಿರುವ ಕೌರ್ಯ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಈ ಮಧ್ಯೆ ಚಿತ್ರತಂಡ ಶಂಕರ್ ನಾಗ್ ಹುಟ್ಟುಹಬ್ಬದ ದಿನ(ನವಂಬರ್ 9)ದಂದು 150 ಕೆ.ಜಿ ಕೇಕ್‍ನಲ್ಲಿ ಶಂಕರ್ ನಾಗ್ ಅವರ ಸಾಂಗ್ಲಿಯಾನ ಬೊಂಬೆಯನ್ನು ಮತ್ತು ಗೀತಾ ಓ ಮೈ ಗೀತಾ…. ಎಂಬ ಚಿತ್ರದ(Lyrical video) ಹಾಡು ಒಂದನ್ನು ಬಿಡುಗಡೆ ಮಾಡಲಾಯಿತು.

ಈ ಹಾಡಿನಲ್ಲಿ ಶಂಕರ್ ನಾಗ್ ಅವರು ನಟಿಸಿರುವ ಚಿತ್ರದ ಹೆಸರು ಇರುವ ಹಾಡು ಇದ್ದಾಗಿದ್ದು, ಹರ್ಷಿತ್ ಹಾಡನ್ನು ಬರೆದಿದ್ದು ಚೇತನ್ ನಾಯ್ಕ್ ಮತ್ತು ಮಾನ್ಸಿ ಹಾಡನ್ನು ಹಾಡಿದ್ದಾರೆ. ಆಕ್ಷನ್, ಥ್ರಿಲ್ಲರ್ ಜೊತೆಗೆ ಸಸ್ಪೆನ್ಸ್ ಇರುವ ಈ ಸಿನಿಮಾವನ್ನು ಅನಿಲ್‍ಕುಮಾರ್ ರಾಜಪ್ಪ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ವಿನೋದ್ & ಸುಧಾನಶು ಸಂಗೀತ ನೀಡಿದ್ದಾರೆ. ಚಿತ್ರದ ನಾಯಕರಾಗಿ ನವೀನ್ ತೀರ್ಥಹಳ್ಳಿ ಮತ್ತು ಶಶಾಂಕ್ ನಾಯಕಿಯಾಗಿ ನಯನ ಹಾಗೆಯೇ ಪ್ರಮುಖ ಪಾತ್ರಗಳಲ್ಲಿ ಶಶಾಂಕ್,ಲೀಲಾ ಮೋಹನ್, ರಮೇಶ್ ಭಟ್, ಕಾಮಿಡಿ ಕಿಲಾಡಿ ಖ್ಯಾತಿಯ ನಯನ ಮುಂತಾದವರು ಅಭಿನಯಿಸಿದ್ದಾರೆ. ಚಿತ್ರದ ನಿರ್ಮಾಣವನ್ನು ಮಂಜುನಾಥ್,ಡಾ. ಅರವಿಂದ್ ಶ್ರೀನಿವಾಸ್ ಮತ್ತು ಆದಿತ್ಯ ಫಿಲಂಸ್ ಮಾಡಿದ್ದಾರೆ.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here