ಗಡಿಯಾರ ಚಿತ್ರದ First Look ಬಿಡುಗಡೆ

0
364

ಮೊದಲ ಬಾರಿಗೆ ಪ್ರಬಿಕ್ ಮೋಗವೀರ್ ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶನದ ಜೊತೆಗೆ ನಿರ್ಮಾಣ ಮಾಡಿರುವ ಗಡಿಯಾರ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದ್ದು,ಚಿತ್ರದ ಫಸ್ಟ್ ಲುಕ್ ನ್ನು ಮುಖ್ಯಮಂತ್ರಿಯಾದ ಬಿ ಎಸ್ ಯಡಿಯೂರಪ್ಟ ನವರು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು.

ವಿಭಿನ್ನ ಕಥೆಯುಳ್ಳ ಈ ಚಿತ್ರದಲ್ಲಿ 25 ಕ್ಕೂ ಹೆಚ್ಚು ಕಲಾವಿದರು ನಟಿಸಿದ್ದಾರೆ. ಚಿತ್ರದ ಮುಖ್ಯ ಪಾತ್ರಗಳಲ್ಲಿ ರಾಜ್ ದೀಪಕ್ ಶೆಟ್ಟಿ, ಶೀತಲ್ ಶೆಟ್ಟಿ ಹಾಗೂ ಪೋಷಕ ಪಾತ್ರದಲ್ಲಿ ಶರತ್ ಲೋಹಿತಾಶ್ವ ಮತ್ತು ಸುಚೇಂದ್ರ ಪ್ರಸಾದ್ ನಟಿಸಿದ್ದಾರೆ. ಎಸ್ ಪಿ ಸಾಂಗ್ಲಿಯಾನ ಅವರು ವಿಶೇಷ ಪಾತ್ರದಲ್ಲಿ ನಟಿಸಿದ್ದು, ಅತಿಥಿ ಪಾತ್ರಗಳಲ್ಲಿ ಮಲಯಾಳಂನ ನಟ ರಿಹಾಜ್ ಎಮ್ ಟಿ ಹಾಗೂ ಹಿಂದಿಯ ಗೌರಿ ಶಂಕರ್ ಕಾಣಿಸಿಕೊಂಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here