ಡೆಮೊ ಪೀಸ್ First Look ರಿಲೀಸ್

0
229

ಬ್ರಹ್ಮಗಂಟು ಧಾರಾವಾಹಿ ಖ್ಯಾತಿಯ ಭರತ್ ನಾಯಕನಾಗಿ ನಟಿಸಿರುವ ಡೆಮೊ ಪೀಸ್ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಹಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ವಿವೇಕ್ ಗೌಡ ಅವರು ಈ ಚಿತ್ರದ ಮೂಲಕ ಸ್ವತಂತ್ರ್ಯ ನಿರ್ದೇಶಕರಾಗುತ್ತಿದ್ದಾರೆ. ವಿವೇಕ್ ಗೌಡ ಅವರು ಚಿತ್ರದ ಬಗ್ಗೆ ಹೇಳುತ್ತ “ಚಿತ್ರದ  ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದೆ  ಈಗ ಪೊಸ್ಟ್ ಪ್ರೊಡಕ್ಷನ್ ನಡೆಯುತ್ತಿದೆ ಹಾಗೂ 15 ದಿನಗಳಲ್ಲಿ ಚಿತ್ರದ ಸಾಂಗ್ ಒಂದನ್ನು ರಿಲೀಸ್ ಮಾಡುತ್ತೇವೆ” ಎಂದರು. ಚಿತ್ರವನ್ನು ಸ್ಪರ್ಶ ರೇಖಾರವರು ನಿರ್ಮಾಣ ಮಾಡುತ್ತಿದ್ದಾರೆ.

ಭರತ್‍ಗೆ ನಾಯಕಿಯಾಗಿ ಸೋನಾಲ್ ಮಾಂತೆರೋ ಅಭಿನಯಿಸಿದ್ದು ಇನ್ನೂ ಉಳಿದ ಇತರ ಪಾತ್ರಗಳಲ್ಲಿ ಚಕ್ರವರ್ತಿ ಚಂದ್ರಚೂರ್, ಶ್ರೀಕಾಂತ್ ಹೆಬ್ಳೀಕರ್, ಸ್ಪರ್ಶ ರೇಖಾ, ರೂಪೇಶ್ ಕಾರ್ತಿಕ್ ಮುಂತಾದವರು ನಟಿಸುತ್ತಿದ್ದಾರೆ. ಬೆಂಗಳೂರು ಮತ್ತು ತುಮಕೂರು ಸ್ಥಳಗಳಲ್ಲಿ  ಚಿತ್ರವನ್ನು ಚಿತ್ರೀಕರಿಸಲಾಗಿದೆ. ಚಿತ್ರಕ್ಕೆ ಅರ್ಜುನ್ ರಾಮು ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here