ತಾಜ್‍ಮಹಲ್-2ಗೆ ದೇವರಾಜ್ ಕುಮಾರ್ ನಾಯಕ…

0
488

ಡೇಂಜರ್ ಝೋನ್, ನಿಶ್ಯಬ್ಧ-2 ಮತ್ತು ಅನುಷ್ಕ ಚಿತ್ರಗಳನ್ನು ನಿರ್ದೇಶನ ಮಾಡಿದ ದೇವರಾಜ್ ಕುಮಾರ್ ಈಗ ತಾಜ್‍ಮಹಲ್-2 ಸಿನಿಮಾ ಮಾಡುತ್ತಿದ್ದಾರೆ. ದೇವರಾಜ್ ಅವರು ನಿರ್ದೇಶನದ ಜೊತೆಗೆ ಚಿತ್ರದ ನಾಯಕನಾಗಿ ನಟಿಸುತ್ತಿರುವುದು ಈ ಚಿತ್ರದ ವಿಶೇಷವಾಗಿದ್ದು, ಎರಡು ಶೆಡ್‍ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶ್ರೀ ಗಂಗಾಬಿಕೆ ಫಿಲಂಸ್ ಬ್ಯಾನರ್ ನಲ್ಲಿ ಚಿತ್ರ ತಯಾರಾಗುತ್ತಿದೆ.
ಈಗಾಗಲೇ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು,ಕನಕಪುರ ಹಾಗೂ ಸಕಲೇಶಪುರ ಸುತ್ತಮುತ್ತ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆಯಂತೆ. ನಾಯಕಿಯಾಗಿ ಸಮ್ಮದ್ದಿ ನಟಿಸಿದ್ದಾರೆ ಇತರೆ ಪಾತ್ರಗಳಲ್ಲಿ ತಬಲಾ ನಾಣಿ, ಕಡ್ಡಿಪುಡ್ಡಿ ಚಂದ್ರು, ಜಿಮ್ ರವಿ ಮುಂತಾದವರು ನಟಿಸಿದ್ದಾರೆ. ಚಿತ್ರದಲ್ಲಿ 5 ಹಾಡುಗಳಿದ್ದು, ವಿಕ್ರಮ್ ಸೆಲ್ವ ಸಂಗೀತ ಸಂಯೋಜನೆ ಮಾಡಿದ್ದಾರೆ.ಚಿತ್ರದ ಟೀಸರ್ ಅತಿಶೀಘ್ರದಲೇ ಬಿಡುಗಡೆ ಮಾಡುತ್ತೇವೆ ಎಂದು ಚಿತ್ರತಂಡ ತಿಳಿಸಿದೆ.

ADD

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here