ದಿ ವಿಲ್ಲನ್ ಚೇಸಿಂಗ್… ಬ್ಯಾಂಕಾಕ್ ನಲ್ಲಿ

0
774

ಸ್ಯಾಂಡಲ್‍ವುಡ್‍ನ ಬಹು ನಿರೀಕ್ಷಿತ ಹಾಗೂ ಬಹು ಕೋಟಿ ವೆಚ್ಚದ ಸಿನಿಮಾ “ದಿ ವಿಲ್ಲನ್”.ಡಾ ಶಿವರಾಜ್‍ಕುಮಾರ್ & ಕಿಚ್ಚ ಸುದೀಪ್ ಅವರ ಅಭಿನಯದ, ಸಿ ಆರ್ ಮನೋಹರ್ ನಿರ್ಮಾಣದ, ಪ್ರೇಮ್‍ರವರ ನಿರ್ದೇಶನದ ವಿಲ್ಲನ್ ಚಿತ್ರ ತಂಡ ಚೇಸಿಗ್ ಸನ್ನಿವೇಶದ ಚಿತ್ರೀಕರಣ ಮಾಡಲು ಬ್ಯಾಂಕಾಕ್ ತಲುಪಿದೆ. 2 ದಿವಸಗಳಲ್ಲಿ ರೋಮಚನವಾಗುವಂತೆ ಚೇಸಿಗ್ ಚಿತ್ರೀಕರಣ ಮಾಡಲು ಚಿತ್ರತಂಡ ಸಜ್ಜಾಗಿದೆ.ಈ ಚೇಸಿಂಗ್ ದೃಶ್ಯವನ್ನು ಸೆರೆಹಿಡಿಯಲು 3.5 ಕೋಟಿ ರೂಪಾಯಿ ಖರ್ಚಾಗುವುದು ಎಂದು ಅಂದಾಜಿಸಲಾಗಿದೆ. ಶಿವರಾಜ್‍ಕುಮಾರ್, ಸುದೀಪ್ ಹಾಗೂ ತಿಲಕ್ ಈ ದೃಶ್ಯವಳಿಯಲ್ಲಿ ಪಾಲ್ಗೊಳ್ಳರಿದ್ದಾರೆ. ಈ ಸಾಹಸಕ್ಕೆ ಮಾಸ್ ಮಾದರವರು ಸಾಹಸ ನಿರ್ದೇಶನ ಮಾಡುತ್ತಿದು ವಿದೇಶದ ಕೆಲ ಸಾಹಸಿಗರನ್ನು ಬಳಸಿಕೊಳ್ಳಲಾಗುವುದು ಎಂದು ಪ್ರೇಮ್ ಹೇಳಿಕೊಂಡಿದ್ದಾರೆ.ಬಹು ಭಾಷಿ ನಟಿ ಆಮಿ ಜಾಕ್ಸನ್ ಈ ಚಿತ್ರದ ಮೂಲಕ ಕನ್ನಡಕ್ಕೆ ಆಗಮಿಸಿದ್ದಾರೆ, ಶ್ರುತಿ ಹರಿಹರನ್, ಶ್ರೀಕಾಂತ್, ಹಿಂದಿ ನಟ ಮಿಥುನ್ ಚಕ್ರವರ್ತಿ ಅಭಿನಯಿಸಿದ್ದಾರೆ. ತನ್ವಿ ಫಿಲ್ಮ್ ಅಡಿಯಲ್ಲಿ ತಯಾರಾಗುತ್ತಿರುವ ” ದಿ ವಿಲ್ಲನ್” ಚಿತ್ರಕ್ಕೆ ಸಿ ಆರ್ ಗೋಪಿ ಸಹ ನಿರ್ಮಾಪಕರು, ಅರ್ಜುನ್‍ಜನ್ಯ ಸಂಗೀತ ನಿರ್ದೇಶಕರು, ಗಿರೀಶ್ ಆರ್ ಗೌಡ ಪ್ರಮುಖ ತಾಂತ್ರಿಕ ವರ್ಗದಲ್ಲಿ ಕೆಲಸ ಮಾಡುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here