ಹೊಸ ಪ್ರತಿಭೆ ಈ ಖಳನಾಯಕ

0
1258

ದಯಾನಂದ್ ಸಾಗರ್ ಎಂಬ ಹೊಸ ಪ್ರತಿಭೆ ರುದ್ರಿ ಎಂಬ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಮೂಲತಃ ದಾವಣೆಗೆರೆ ಊರಿನವರಾಗಿರುವ ದಯಾನಂದ್ ಅವರು Diploma ಮಾಡುತ್ತಿದ್ದಾಗ ಹಾಗೆಯೇ ಎನ್‌ಎಸ್‌ಎಸ್ ಕ್ಯಾಂಪ್‌ಗೆ ಸೇರಿದರು. ಈ ಕ್ಯಾಂಪ್‌ನಲ್ಲಿ ವೇಷ-ಭೂಷಣ ಸ್ಪರ್ಧೆ, ಚಿಕ್ಕ ಪುಟ್ಟ ನಾಟಕಗಳಲ್ಲಿ ಭಾಗವಹಿಸುತ್ತಿದ್ದರು, ಇವರ ಅಭಿನಯವನ್ನು ಕಂಡ ಸ್ನೇಹಿತರು ಚಪ್ಪಳೆ ಹೊಡೆದು ಅಭಿನಂದಿಸಿದರಂತೆ. ಆ ಚಪ್ಪಾಳೆಯಿಂದ ದಯಾನಂದ್‌ಗೆ ನಟನಾಗ ಬೇಕು ಎಂದು ಆಸಕ್ತಿ ಹೆಚ್ಚಾಗಿ ಓದು ಮುಗಿದ ನಂತರ ಬೆಂಗಳೂರಿಗೆ ಬಂದರು.

                
ಬೆಂಗಳೂರಿಗೆ ಬಂದ ಮೇಲೆ ಒಂದು ಕಂಪನಿಯಲ್ಲಿ ಕೆಲಸಕ್ಕೆ ಸೇರಿ ಫ್ರೀ ಟೈಮ್ ನಲ್ಲಿ ಆಡಿಷನ್‌ಗೆ ಹೋಗುತ್ತಿದ್ದಾರು. ನಟನೆಯಲ್ಲಿ ಏನೆಂದರು ಸಾಧನೆ ಮಾಡಬೇಕೆಂದು ನಿರ್ಧರಿಸಿ ಮಾಡುತ್ತಿದ್ದ ಕೆಲಸವನ್ನು ಬಿಟ್ಟು , ವಿಜಯನಗರ ಶಿಕ್ಷಣ ಕೇಂದ್ರದಲ್ಲಿ ಐದು ವರ್ಷದ ನಟನೆಯ ಕೋರ್ಸ್ ಗೆ ಸೇರಿದರು. ಕೋರ್ಸ್ ಮುಗಿದ ನಂತರ ಸೈಡ್‌ವಿಂಗ್ ನಾಟಕ ಟೀಮ್‌ನಲ್ಲಿ ಸೇರಿ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ.
ಸ್ನೇಹಿತರ Reference ನಿಂದ ರುದ್ರಿ ಚಿತ್ರದ ಆಡಿಷನ್‌ಗೆ ಹೋದ ದಯಾನಂದ್ ಸಾಗರ್‌ಗೆ ಚಿತ್ರದಲ್ಲಿ ಖಳನಾಯಕನ ಪಾತ್ರಕ್ಕೆ ಆಯ್ಕೆಯಾದರು. ಇವರಿಗೆ ಕನ್ನಡ ಚಿತ್ರದಲ್ಲಿ ಹೆಚ್ಚಾಗಿ ಅವಕಾಶಗಳು ಸಿಗಲಿ ಎಂದು ನಾವು ಹಾರೈಸುತ್ತೇವೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here