ನಮ್ ಗಣಿ B.com ಪಾಸ್ ಚಿತ್ರದಲ್ಲಿ ಅಭಿಷೇಕ್ ಶೆಟ್ಟಿ

0
246

ಕೆಲವು short ಮೂವಿಗಳನ್ನು ನಿರ್ದೇಶನ ಮಾಡಿ ಮತ್ತು ಹಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಅಭಿಷೇಕ್ ಶೆಟ್ಟಿ ಈಗ ನಮ್ ಗಣಿ ಬಿಕಾಂ ಪಾಸ್ ಚಿತ್ರಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ಚಿತ್ರದ ನಾಯಕನಾಗಿ ನಟಿಸಿದ್ದಾರೆ“ಚಿತ್ರದ ನಾಯಕ ಮಧ್ಯಮ ಕುಟುಂಬ ವರ್ಗದವನಾಗಿರುತ್ತಾನೆ ಅವನ ಹೆಸರು ಗಣೇಶ್ ಅಲಿಯಾಸ್ ಗಣಿ ಬಿಕಾಂ ಮುಗಿಸಿಕೊಂಡು ದೊಡ್ಡ ಕಂಪನಿಯಲ್ಲಿ ಕೆಲಸ ಸಿಗದೆ ನಿರುದ್ಯೋಗಿಯಾಗುತ್ತಾನೆ ಇದರಿಂದ ಎಲ್ಲಾ ಕಡೆಗಳಿಂದಲೂ ಅವಮಾನ ಅನುಭವಿಸುತ್ತಾನೆ.ಅವಮಾನಗಳಿಂದ ಆಚೆ ಬರಲು ವ್ಯಾಪಾರ ಮಾಡಲು ನಿರ್ಧರಿಸುತ್ತಾನೆ ಆದರೆ ವ್ಯಾಪಾರಕ್ಕೆ ಹತ್ತು ಲಕ್ಷ ಬೇಕಾಗಿರುತ್ತದೆ”. ಹತ್ತು ಲಕ್ಷ ಹಣವನ್ನು ಗಣಿ ಹೇಗೆ ಸಂಪಾದಿಸುತ್ತಾನೆ..? ಎಂಬುದನ್ನು ಚಿತ್ರ ನೋಡಿದ್ದಾರೆ ತಿಳಿಯುತ್ತದೆ ಎಂದು ಅಭಿಷೇಕ್ ಶೆಟ್ಟಿ ಹೇಳಿದರು.
 ಅಭಿಷೇಕ್‍ಗೆ ನಾಯಕಿಯಾಗಿ ಐಶಾನಿ ಶೆಟ್ಟಿ ನಟಿಸಿದ್ದಾರೆ.ನಾಗೇಶ್‍ಕುಮಾರ್ ನಿರ್ಮಾಣ ಮಾಡಿರುವ ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು ಸೋಶಿಲ್ ಮೀಡಿಯದಲ್ಲಿ ತುಂಬಾನೇ ಸೌಂಡ್ ಮಾಡ್ತಾಇದೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು ವಿಕಾಸ್ ವಷಿಷ್ಠ ಸಂಗೀತ ನೀಡಿದ್ದಾರೆ. ಇತರ ಪಾತ್ರಗಳಲ್ಲಿ ನಾಟ್ಯ ರಂಗ,ಪಲ್ಲವಿ ಗೌಡ,ರಚನ, ಸುಚೇಂದ್ರ ಪ್ರಸಾದ್, ಸುಧಾ ಬೆಳವಾಡಿ ಮುಂತಾದವರ ತಾರಾಬಳಗವಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here