ಬೆಂಕಿಯ ಬಲೆ ಚಿತ್ರ ರಿಲೀಸ್ ಗೆ ರೆಡಿ..

0
409

ಹೊಸ ಪ್ರತಿಭೆಗಳು ನಟಿಸಿರುವ ಮತ್ತು ಸ್ಕ್ರಿಪ್ಟ್ ಇಲ್ಲದೇ ತಯಾರಾಗಿರುವ ಬೆಂಕಿಯ ಬಲೆ ಪ್ರೀತಿಯ ಕೊಲೆ ಚಿತ್ರವು ಇದೇ ನವಂಬರ್ ತಿಂಗಳಿನಲ್ಲಿ ಬಿಡುಗಡೆಯಾಗುತ್ತಿದೆ. ಮೈಸೂರು ಶಿವಾಜಿ ನಿರ್ಮಾಣ & ನಿರ್ದೇಶನ ಮಾಡಿರುವ ಈ ಚಿತ್ರದ ಪೋಸ್ಟರನ್ನು ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರ ಸಹೋದರರಾದ ದಾಮೋದರ್ ಪ್ರಹ್ಲಾದ್ ಮೋದಿಯವರು ಬಿಡುಗಡೆ ಮಾಡಿ ಚಿತ್ರಕ್ಕೆ ಶುಭಹಾರೈಸಿದ್ದಾರೆ.

ಮೈಸೂರು ಶಿವಾಜಿ ಅವರು “ಮಹಿಳಾ ದೌರ್ಜನ್ಯ ಮತ್ತು ಮನುಷ್ಯ ಸಮಸ್ಯೆಗಳನ್ನು ಎದುರಿಸಲಾಗದೆ ದುಷ್ಟುಚಟಗಳಿಗೆ ಬಿದ್ದು ಕ್ಯಾನ್ಸರ್ ರೋಗಕ್ಕೆ ಬಲಿಯಾಗುತ್ತಾನೆ.. ಈ ವಿಷಯಗಳ ಕುರಿತು ಚಿತ್ರವನ್ನು ಮಾಡಲಾಗಿದೆ ಹಾಗೂ ಹಾಸ್ಯವು ಕೂಡ ಚಿತ್ರದಲ್ಲಿದೆ. ಆರು ಹಾಡುಗಳು, ನಾಲ್ಕು ಫೈಟಿಂಗ್‍ಗಳು ಇವೆ. ಇನ್ನೂರ ಐವತ್ತು ಜನ ಕಲಾವಿದರು ನಟಿಸಿದ್ದಾರೆ ಮತ್ತು ಅತಿ ಕಡಿಮೆ ವೆಚ್ಚದಲ್ಲಿ ಚಿತ್ರವನ್ನು ನಿರ್ಮಿಸಲಾಗಿದೆ”  ಎಂದು ಹೇಳಿದರು.ಚಿತ್ರಕ್ಕೆ ಮನುರಾವ್ ಸಂಗೀತ ನೀಡಿದ್ದಾರೆ.ಮೈಸೂರು, ಬೆಳ್ಳೂರು ಮುಂತಾದ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. ಮೈಸೂರು ಶಿವಾಜಿ ಅವರು ಶಿವಾನೇ ಗೌಡ ಎಂಬ ಪಾತ್ರದಲ್ಲಿ ಅಭಿನಯಿಸಿದ್ದಾರೆ ಇತರೆ ಪಾತ್ರಗಳಲ್ಲಿ ಲೋಕೇಶ್ ರಾವ್, ಮಂಜೇಶ್, ಪ್ರೀತಿ, ಪ್ರಿಯಾ ಪಾಂಡೆ, ಸುಮ ಮುಂತಾದವರ ತಾರಬಳಗವಿದೆ. ಶಿವಾಜಿ ಪಿಕ್ಚರ್ಸ್ ಬ್ಯಾನರ್ ನಲ್ಲಿ ಚಿತ್ರ ತಯಾರಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here