ಬೆಟ್ಟದ ದಾರಿಗೆ ಎರಡು ಪ್ರಶಸ್ತಿಗಳು

0
401

ಹೀರಾಲಾಲ್ ಮೂವೀಸ್ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ ಬೆಟ್ಟದ ದಾರಿ ಚಿತ್ರಕ್ಕೆ  “ಇಂಟರ್ ನ್ಯಾಷನಲ್ ಐಕಾನ್ ಮುಂಬೈ” ಯಿಂದ ಎರಡು ಆವಾರ್ಡ್‍ಗಳು ಬಂದಿದ್ದು ಚಿತ್ರತಂಡ ತುಂಬಾ ಖುಷಿಯಾಗಿದೆ. ಈ ಚಿತ್ರವನ್ನು ಮಾ ಚಂದ್ರು ನಿರ್ದೇಶನ ಮಾಡಿದ್ದು ಚಂದ್ರಕಲಾ ಮತ್ತು ಮಂಜುನಾಥ್ ಎಸ್ ನಾಯಕ್ ಅವರು ನಿರ್ಮಾಣ ಮಾಡಿದ್ದಾರೆ. ದಿ ಬೆಸ್ಟ್ ಸ್ಯಾಂಡಲ್‍ವುಡ್ ಬಾಲ ನಟನಾಗಿ ನಿಶಾಂತ್ ಟಿ ರಾಠೋಡ್ ಮತ್ತು ದಿ ಬೆಸ್ಟ್ ಸ್ಯಾಂಡಲ್‍ವುಡ್ ಮಹಿಳಾ ನಿರ್ಮಾಪಕಿ ಎಂದು ಚಂದ್ರಕಲಾ ಟಿ ಆರ್ ಅವರು ಪ್ರಶಸ್ತಿ ಪಡೆದಿದ್ದಾರೆ
ಅದೊಂದು ಕಾಲ್ಪನಿಕ ಊರು. ನೀರು ಇಲ್ಲದೇ ಬರದಿಂದ ಇರುವಂತ ಹಳ್ಳಿ,ನೀರಿಗಾಗಿ ಹಳ್ಳಿಯ ಜನರು ಹೋರಾಟ ಮಾಡುತ್ತಿರುತ್ತಾರೆ. ಅದೇ ಊರಿನಲ್ಲಿರುವಂತಹ ಮಕ್ಕಳು ಊರಿಗೆ ನೀರು ತರಬೇಕೆಂದು ಸರಕಾರಿ ಕಛೇರಿಗಳಿಗೆ ಅಲೆಯುತ್ತಾರೆ ಮತ್ತು ನಾಯಕರ ಮನೆಗೆ ಹೋಗುತ್ತಾರೆ ಆದರೂ ಪರಿಹಾರ ಸಿಗುವುದಿಲ್ಲ.ನೀರಿನ ಸಮಸ್ಯೆಗೆ ಪರಿಹಾರ ಹೇಗೆ ಸಿಗುತ್ತದೆ..? ಎಂಬುದೇ ಚಿತ್ರದ ಕಥೆ ಎಂದರು ನಿರ್ದೇಶಕರು. ಚಿತ್ರದಲ್ಲಿ ನಿಶಾಂತ್ ಟಿ ರಾಠೋಡ್,ಅಂಕಿತ್,ನವನಿಧಿ,ಲಕ್ಷ್ಮೀಶ್ರೀ,ವಿಘ್ನೇಶ್,ಮಾನ್ಯತಾ,ಎಂ ನಾಯಕ್ ಸೇರಿ ಹಲವು ಮಕ್ಕಳು ನಟಿಸಿದ್ದಾರೆ. ಪೋಷಕ ಪಾತ್ರಗಳಲ್ಲಿ ಉಮೇಶ್, ರಮೇಶ್ ಭಟ್, ಬ್ಯಾಂಕ್ ಜನಾರ್ಧನ್ ಅಭಿನಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here