ಭರತ್ ಬೊಪ್ಪಣ್ಣ ಈಗ ಡೆಮೊಪೀಸ್

0
432

ಬ್ರಹ್ಮಗಂಟು ಧಾರಾವಾಹಿಯಲ್ಲಿ ಲಕ್ಕಿ ಎಂಬ ಪಾತ್ರದ ಮೂಲಕ ಪರಿಚಿತರಾಗಿರುವ ಭರತ್ ಬೊಪ್ಪಣ್ಣ ಮೊದಲ ಬಾರಿಗೆ ನಾಯಕನಾಗಿ ಸ್ಪರ್ಶ ರೇಖಾ ನಿರ್ಮಾಣದಲ್ಲಿ ತಯಾರಾಗಿರುವ ಡೆಮೊಪೀಸ್‍ ಚಿತ್ರದಲ್ಲಿ ನಟಿಸಿದ್ದಾರೆ & ಚಿತ್ರದಲ್ಲಿ ಕಾಲೇಜ್ ವಿದ್ಯಾರ್ಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ, ಈಗಿನ ಯೂಥ್ಸ್ ಜೀವನಶೈಲಿ, ಫ್ಯಾಮಿಲಿ ಸ್ಟೋರಿ ಜೊತೆಗೆ ಡ್ಯಾನ್ಸ್, ಫೈಟ್ಸ್ ಇರುವಂತ ಕರ್ಮಷಿಯಲ್ ಚಿತ್ರವಂತೆ.  ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದ್ದು, ಈಗ ಪೋಸ್ಟ್ ಪ್ರೊಡಕ್ಷನ್ ನಡೆಯುತ್ತಿದೆಯಂತೆ. ಡೆಮೊಪೀಸ್‍ಗೆ ವಿವೇಕ್ ಗೌಡರವರು ಆಕ್ಷನ್-ಕಟ್ ಹೇಳಿದ್ದಾರೆ ಮತ್ತು ಸ್ಪರ್ಶ ರೇಖಾ ಅವರು ಚಿತ್ರದ ನಿರ್ಮಾಣದ ಜೊತೆಗೆ ಭರತ್ ತಾಯಿಯ ಪಾತ್ರದಲ್ಲಿ ನಟಿಸಿದ್ದು, ನಾಯಕಿಯಾಗಿ ಸೋನಾಲ್ ಮಾಂತೆರೋ ಅಭಿನಯಿಸಿದ್ದಾರೆ. ಭರತ್‍ರವರ ಹುಟ್ಟಿದ ದಿನ ಚಿತ್ರದ FIrst Look ನ್ನು ಬಿಡುಗಡೆ ಮಾಡಿದ ಚಿತ್ರತಂಡ ಇದೇ ತಿಂಗಳು ಆಡಿಯೋ ರಿಲೀಸ್ ಮಾಡಲು ತಯಾರಾಗುತ್ತಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here