ಮಾಚಂದ್ರು ಮತ್ತೊಂದು ಸಿನಿಮಾ ನಡುಗಲ್ಲು

0
243

ಪೂರ್ವಿಕಾಮೃತ ಕ್ರಿಯೇಸನ್ಸ್ ಜೊತೆಗೆ ಹೀರಾಲಾಲ್ ಮೂವೀಸ್ ಸಹಕಾರದೊಂದಿಗೆ ನಡುಗಲ್ಲು ಚಿತ್ರದ ಮುಹೂರ್ತ ಹನುಮ ಜಯಂತಿಯ ದಿನದಂದು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ಮಾಚಂದ್ರು ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಮಕ್ಕಳ ಚಿತ್ರವಾಗಿದು, ನಡುಗಲ್ಲು ಎಂಬ ಊರಿನ ಸ್ಕೂಲ್‍ನಲ್ಲಿ ಪ್ರಾಂಶುಪಾಲರು ಮತ್ತು ವಿದ್ಯಾರ್ಥಿಗಳ ನಡುವೆ ನಡೆಯುವ ಘಂಟನೆಗಳ ಚಿತ್ರದ ಕಥೆ ಎಂದು ನಿರ್ದೆಶಕರು ಹೇಳಿದರು.

 ಚಿತ್ರದ ಚಿತ್ರೀಕರಣವನ್ನು ಒಂದೇ ಹಂತದಲ್ಲಿ ಮುಗಿಸಲು ಚಿತ್ರತಂಡ ತಯಾರಾಗುತ್ತಿದೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು ಎ ಟಿ ರವೀಶ್ ಸಂಗೀತ ನೀಡುತ್ತಿದ್ದಾರೆ. ಸೂರ್ಯೋಧಯ -ಜಾನ್ ಛಾಯಗ್ರಹಣ ಚಿತ್ರಕ್ಕಿದೆ.ಈ ಚಿತ್ರವನ್ನು ಪಿ ಹರಿಹರನ್ ನಿರ್ಮಾಣ ಮಾಡುತ್ತಿದ್ದಾರೆ.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here