ಯರ್ರಾ ಬಿರ್ರಿ ಹಾಡು ಬಿಡುಗಡೆ…

1
1452

ಗೋವಿಂದ್ ದಾಸರ್ ನಿರ್ದೇಶನದಲ್ಲಿ ರೂರಲ್ ಅಂಜನ್ ಬಿಗ್ ಬಾಸ್ ಖ್ಯಾತಿಯ ಸೋನು ಪಾಟೀಲ್ ನಾಯಕ-ನಾಯಕಿಯಾಗಿ ನಟಿಸಿರುವ ಯರ್ರಾ ಬಿರ್ರಿ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ ಹುಬ್ಬಳಿಯಲ್ಲಿ ನಡೆಯಿತು, ಡಿಸಿಸಿ(ದಾಸ ಸಿನಿ ಕ್ರಿಯೇಷನ್) ನಿರ್ಮಾಣದಲ್ಲಿ ತಯಾರಾಗಿರುವ ಈ ಸಿನಿಮಾದಲ್ಲಿ ಬಹುತೇಕ ಉತ್ತರ ಕರ್ನಾಟಕದ ಕಲಾವಿದರು ನಟಿಸಿದ್ದಾರೆ.

           ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಶಿವು ಬೇರ್ಗಿ ಸಂಗೀತ ನೀಡಿದ್ದಾರೆ. ಚೇತನ್ ನಾಯ್ಕ್ ಹಾಡಿರುವ ಶಿವ ಬೇರ್ಗಿ ಬರೆದಿರುವ ಚಿತ್ರದ ಒಂದು ಹಾಡು(ಬರ್ತಿರೊದು ರೂರಲ್) ಬಿಡುಗಡೆಯಾಗಿದ್ದು, ಇನ್ನೂ ಮೂರು ಹಾಡುಗಳನ್ನು ಬೇರೆ ಬೇರೆ ಸ್ಥಳಗಳಲ್ಲಿ ಬಿಡುಗಡೆ ಮಾಡುವ ತಯಾರಿಯಲ್ಲಿದೆ ಚಿತ್ರತಂಡ. ಗೋವಿಂದ್ ದಾಸರ್ ನಿರ್ದೇಶನ ಮಾಡುವುದರ ಜೊತೆಗೆ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ಸಂಕಲನ ಮಾಡಿದ್ದಾರೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ಎಸ್. ಕೆ. ಉಪ್ಪಾರ ಸುನಂದ ಹೊಸಪೇಟ್, ರವಿ ಸುಬ್ಬರಾವ್, ಆನಂದ ರಂಗರೆಜ್, ಎಂಜಿಆರ್ ಗೋಪಾಲ್ ರೆಡ್ಡಿ, ಶರಣು, ಚಂದ್ರು ನಟಿಸಿದ್ದಾರೆ.

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here