ರಕ್ಷಿತ್ ಹೇಳುತ್ತಿದ್ದಾರೆ ಎಂಥಾ ಕಥೆ ಮಾರಾಯಾ

0
528

ಹೊಂಬಣ್ಣ ಸಿನಿಮಾದ ನಂತರ ರಕ್ಷಿತ್ ತೀರ್ಥಹಳ್ಳಿ ಅವರು ಈಗ ವಿಭಿನ್ನ ಕಥೆಯುಳ್ಳ ಎಂಥಾ ಕಥೆ ಮಾರಾಯಾ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಸಂಚಲನ ಮೂವೀಸ್ ಬ್ಯಾನರ್ ನಲ್ಲಿ ರಾಮಕೃಷ್ಣ ನಿಗಡೆ ನಿರ್ಮಾಣ ಮಾಡಿರುವ ಈ ಚಿತ್ರದ ಚಿತ್ರೀಕರಣ ಮುಗಿದ್ದು ಪೋಸ್ಟ್ ಪ್ರೋಡಕ್ಷನ್ ನಡೆಯುತ್ತಿದೆ. ಚಿತ್ರದ ಎಂಥಾ ಸಾವೋ ಮಾರಾಯಾ ಎಂಬ ಹಾಡನ್ನು (ಲಿರಿಕಲ್ ವಿಡಿಯೊ ಸಾಂಗ್) ಚಿತ್ರತಂಡ ಬಿಡುಗಡೆ ಮಾಡಿದೆ. ರಕ್ಷಿತ್ ತೀರ್ಥಹಳ್ಳಿ ಬರೆದಿರುವ ಈ ಹಾಡನ್ನು ಅನನ್ಯ ಭಟ್ ಹಾಡಿದ್ದು, ಹೇಮಂತ್ ಜೋಯಿಸ್ ಹಾಡಿಗೆ ಸಂಗೀತ ನೀಡಿದ್ದಾರೆ.
“ಪಶ್ಚಿಮ ಘಟ್ಟದಲ್ಲಿ ಶರಾವತಿ ನದಿ ಮತ್ತು ಕಣಿವೆಯಲ್ಲಿ 1960 ಯಿಂದ 2019ವರೆಗೆ ರ್ಕಾರದ ಯೋಜನೆಗಳು ಒಂದು ಕುಟುಂಬದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ..? ಈ ವಿಷಯವನ್ನು ಮಲೆನಾಡಿನ ಭಾಷೆಯಲ್ಲಿ ಹಾಸ್ಯಮಿಶ್ರಿತವಾಗಿ ಸಿನಿಮಾ ಮಾಡಲಾಗಿದೆ” ಎಂದು ನಿರ್ದೇಶಕರು ಹೇಳಿದ್ದರು.

ಚಿತ್ರದ ಪ್ರಮುಖ ಪಾತ್ರಗಳಲ್ಲಿ ವೇದಾಂತ್ ಸುಬ್ರಹ್ಮಣ್ಯ, ಸುದೀರ್ ಎಸ್ ಜೆ, ಶ್ರೀ ಪ್ರಿಯಾ ಇತರೆ ಪಾತ್ರಗಳಲ್ಲಿ ಕೇಶವ್ ಗೂತ್ತಳಿಕೆ, ಪ್ರಾಣೇಶ್, ಸಮೀರ್ ನಗರದ್ ಮುಂತಾದವರು ನಟಿಸಿದರೆ. ಯಡೂರು,ಮಾಸ್ತಿಕಟ್ಟೆ,ತೀರ್ಥಗಳ್ಳಿ ಮುಂತಾದ ಪಶ್ಚಿಮ ಘಟ್ಟದ ಸ್ಥಳಗಳಲ್ಲಿ ಚಿತ್ರೀಕರಣವಾಗಿದೆ. ಗುರುಪ್ರಸಾದ್ ನರ್ನಾಡ್ ಛಾಯಗ್ರಹಣ,ಸುದೀರ್ ಎಸ್ ಜೆ ಸಂಕಲನ ಚಿತ್ರಕ್ಕಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here