ರಾ ಚಿತ್ರದ ಆಡಿಯೋ ರಿಲೀಸ್

0
319

“ರಾ” ಎಂಬ ಹೆಸರಿನಲ್ಲಿ ಕನ್ನಡ ಸಿನಿಮಾ ಒಂದು ಬರುತ್ತಿದೆ.ಮಾಧ್ಯಮದಲ್ಲಿ ಸಿನಿಮಾ ಪತ್ರಕರ್ತರಾಗಿ ಕೆಲಸ ಮಾಡಿದ ರಾಜೇಶ್ ಗೌಡ ಅವರು ಈ ಚಿತ್ರದ ನಿರ್ದೇಶಕರು. ದುಬೈನ ಅಬುಧಾಬಿಯ ಕನ್ನಡ ರಾಜೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ಮೂಲದ ಉದ್ಯಮಿ ಬಿ ಆರ್ ಶೆಟ್ಟಿ ಅವರು ಚಿತ್ರದ ಧ್ವನಿಸುರಳಿಯನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರು.

ಚಿತ್ರದ ನಾಯಕನ ಹೆಸರು ಚಿತ್ರದ ಹೆಸರಿನಂತೆ ರಾ ಎಂಬ ಅಕ್ಷರದಿಂದ ಪ್ರಾರಂಭವಾಗುತ್ತದೆಯಂತೆ. ರಾಜ್‍ಕುಮಾರ್, ರಜನಿಕಾಂತ್,ರಾಮಚಂದ್ರನ್, ರಾಮರಾವ್ ಹೆಸರುಗಳ ಹಾಗೆ ಚಿತ್ರದ ನಾಯಕನ ಹೆಸರು “ರಾ” ಯಿಂದ ಇರುತ್ತದೆಯಂತೆ  ಸಿನಿಪ್ರಿಯರು ಮತ್ತು ಸಿನಿಪ್ರೇಕ್ಷಕರು ಆ ಹೀರೋ ಯಾರೆಂದು ಹೇಳಿದರೆ ಬಹುಮಾನ ಗೆಲ್ಲಬಹುದು.ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಜೇಮ್ಸ್ ಆರ್ಕಿಟೆಕ್ಟಾ ಸಂಗೀತ ನೀಡಿದ್ದಾರೆ. ಸುಜೀತ್ ನಾಯಕ ಸಂಕಲನ, ಕುಮಾರ್ ಛಾಯಗ್ರಹಣ ಚಿತ್ರಕ್ಕಿದೆ.ಚಿತ್ರದ ನಾಯಕಿಯಾಗಿ ಸನಾ ನಟಿಸಿದ್ದು ಇತರೆ ಪಾತ್ರಗಳಲ್ಲಿ ಸಮೀರ್, ಸುದರ್ಶನ್, ಮಂಜುನಾಥ್ ಅಭಿನಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here