ರಿಷಿಕುಮಾರರ ಹಾಡಿಗೆ ಶಶಿಕುಮಾರರ ಹೆಜ್ಜೆ

0
413

ಹೌದು ಸುಮಾರು 20 ವರ್ಷಗಳ ಹಿಂದಿನ ಮಾತು.ಈಗಿನ ಕಾಳೀಮಠದ ಸ್ವಾಮಿಗಳಾದ ರಿಷಿಕುಮಾರ ಸ್ವಾಮಿಜಿಯವರು ಭರತನಾಟ್ಯ  ಕಲಿಯುತ್ತಿದ್ದ ಸಮಯವದು.. ತನ್ನಸಹಪಾಠಿಗಳು ರಿಷಿಕುಮಾರರಿಗೆ ನೀನು ರಿಷಿಕುಮಾರ ಅಲ್ಲ ಕಣೊ.. ಶಶಿಕುಮಾರ ಎಂದಿದ್ದರು..ಕಾರಣವಿಷ್ಟೇ ಥೇಟ್ ಸುಪ್ರೀಂ ಹೀರೋ ಶಶಿಕುಮಾರ್ ರಂತೆ ಹೆಜ್ಜೆಹಾಕುತ್ತಿದ್ದರವರು.
ಇತ್ತೀಚಿಗೆ ರಿಷಿಕುಮಾರ ಸ್ವಾಮೀಜಿಯವರು ಪ್ರಚಂಡ ಪುಟಾಣಿಗಳು ಚಲನಚಿತ್ರಕ್ಕೆ ಹಾಡೊಂದನ್ನು ಹಾಡಿದ್ದರು, ಸುರೇಶ್ ಕಂಬಳಿ ಅವರ ಸಾಹಿತ್ಯಕ್ಕೆ ವಿನುಮನಸು ಸಂಗೀತದಲ್ಲಿ ಮೂಡಿಬಂದ ಯಾರೋ ಹೆತ್ತೋರು ನಿಮ್ಮನ್ನ ಎಂಬ ಹಾಡಿಗೆ ಮೊದಲು ಖುದ್ದಾಗಿ ರಿಷಿಕುಮಾರ ಸ್ವಾಮಿಗಳು ನಟಿಸಬೇಕಿತ್ತಾದರೂ ಚಿತ್ರೀಕರಣದ ದಿನಾಂಕಗಳು ಹೊಂದಾಣಿಕೆ ಆಗದ ಕಾರಣ ಚಿತ್ರದ ನಿರ್ದೇಶಕರು ಶಶಿಕುಮಾರ್ ರವರನ್ನು ಆಯ್ಕೆ ಮಾಡಿಕೊಂಡರು, ನಿಗಧಿ ಮಾಡಿದ ದಿನಾಂಕಕ್ಕೆ ಶಶಿಕುಮಾರ್ ರವರು ನಟಿಸಿದರು. ಹೀಗೆ ರಿಷಿಕುಮಾರರ ಹಾಡಿಗೆ ಶಶಿಕುಮಾರರು ಹೆಜ್ಜೆ ಹಾಕಿದ್ದಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here