ರೋಣದ ಬಕ್ಕೇಶ್- ಕಾರ್ತಿಕ್ ಸಂಗೀತದ ಚಿತ್ರ ಒಂದ್ ಕಥೆ ಹೇಳ್ಲಾ 

0
748

ಮುಖ್ಯ ಕಥೆಯ ಜೊತೆಗೆ ನಾಲ್ಕು ಉಪ ಕಥೆಯಿರುವ ಹೊಸ ತರಹದ ಸಿನಿಮಾವೇ ಒಂದ್ ಕಥೆ ಹೇಳ್ಲಾ ಮೂವಿ. ಈಗಾಗಲೇ ಚಿತ್ರದ Trailer ನ್ನು ಅತಿಹೆಚ್ಚು ಜನ ನೋಡಿ ಮೆಚ್ಚಿಕೊಂಡಿದ್ದು, ಇಂದು ಚಿತ್ರದ ಹಾಡು ಒಂದನ್ನು youtube ನಲ್ಲಿ ಚಿತ್ರ ತಂಡ ಬಿಡುಗಡೆ ಮಾಡಿದೆಪೇಟಾ ಸಿನಿಮಾಸ್ ಬ್ಯಾನರ್ ನಲ್ಲಿ  ಮೂಡಿಬರುತ್ತಿರುವ  ಈ ಚಿತ್ರವನ್ನು ಗಿರೀಶ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ ಮತ್ತು  ರೋಣದ ಬಕ್ಕೇಶ್- ಕಾರ್ತಿಕ್ ಅವರು ಸಂಗೀತ ನೀಡಿದ್ದಾರೆ. ಹೊಸಬರದ ಶಿವಕುಮಾರ್ ಶೆಟ್ಟಿ ಹಾಡಿಗೆ ಸಾಹಿತ್ಯ ಬರೆದಿದ್ದಾರೆ

ರೋಣದ ಬಕ್ಕೇಶ್- ಕಾರ್ತಿಕ್ ಸುದ್ದಿನೋಟದೊಂದಿಗೆ ಮಾತನಾಡಿ ಹೇಳಿದ್ದು ಹೀಗೆ…”ಇದಕ್ಕೂ ಮೊದಲು ಕೆಲವು ದಿನಗಳ ನಂತರ, ಸಂಜೀವ ಚಿತ್ರಗಳಿಗೆ ಹಿನ್ನಲೆ ಸಂಗೀತ ಮಾಡಿದ ನಂತರ ಅನೇಕ Album ಗೆ ಮತ್ತು ಸಿನಿಮಾಗಳಿಗೆ Programmer ಆಗಿ ಕೆಲಸ ಮಾಡಿದ್ದಿವಿ. ಈ ಚಿತ್ರದಲ್ಲಿ 2 ಸಾಂಗ್ ಇದೆ. ಚಿತ್ರದಲ್ಲಿ 5 ಸ್ಟೋರಿ ಇರುವುದರಿಂದ 5 ಕಥೆಗಳಿಗೆ ಬೇರೆ ಬೇರೆ ರೀತಿಯ ಸಂಗೀತ ಕೊಟ್ಟಿದ್ದಿವಿ. ನಮಗೆ ಚಾಲೆಂಜ್ ಆಗಿದ್ದು ಅಂದರೆ…ನಾಟಕದ ಕಥೆ ಹೋಗುತ್ತೆ ಆ ಸನ್ನಿವೇಶಗಳಿ ಹಿನ್ನಲೆ ಸಂಗೀತ ನೀಡಿರುವುದು”ಎಂದರು. ಇವರ ಮುಂದಿನ ಚಿತ್ರಗಳು ಅವನಲ್ಲಿ ಅವಳಲ್ಲಿ, Turning Point .

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here