ಲೆಕ್ಕಾಚಾರ ಪೋಸ್ಟರ್ ಬಿಡುಗಡೆ ಮಾಡಿದ ಶಿವಣ್ಣ

0
273

ಎಂ ಎಸ್ ಕುಮಾರ್ ಮತ್ತು ಆರ್ ಚಂದ್ರು ನಿರ್ಮಾಣದಲ್ಲಿ ಬರುತ್ತಿರುವ ಲೆಕ್ಕಾಚಾರ ಚಿತ್ರದ ಪೋಸ್ಟರ್ ನ್ನು ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದರು. ಎಸ್ ಸೀಮಾ ಪಿಕ್ಚರ್ಸ್ ಬ್ಯಾನರ್ ನಲ್ಲಿ ಈ ಚಿತ್ರ ತಯಾರಾಗಿದ್ದು ಎಂ ಜಿ ರಾಜ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದ್ದು, ಚಿತ್ರವು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.ಚಿತ್ರದ ನಾಯಕನಾಗಿ ಹರ್ಷ ನಾಯಕಿಯಾಗಿ ಯಶಸ್ವಿ ನಟಿಸಿದ್ದಾರೆ ಇವರ ಜೊತೆ ಪ್ರೀತಂ, ಚನ್ನಪ್ಪ ಬಿ, ನರಸಿಂಹ, ಆರ್ ಚಂದ್ರು, ನಟರಾಜ್, ಎಂ ಎಸ್ ಕುಮಾರ್, ಮಂಜುನಾಥ್, ಅಮಿತ್ ಮುಂತಾದವರ ತಾರಾಬಳಗವಿದೆ. ಚಿತ್ರಕ್ಕೆ ಕಾರ್ತಿಕ್ ವೆಂಕಟೇಶ್ ಸಂಗೀತ ನೀಡಿದ್ದು, ಪ್ರದೀಪ್ ಸಂಭಾಷಣೆ ಬರೆದಿದ್ದಾರೆ. ರಾಜು ಶಿರಾ ಮತ್ತು ರಾಜೇಶ್ ಛಾಯಗ್ರಹಣ, ದುರ್ಗಾ ಪಿ ಎಸ್ ಸಂಕಲನ ಚಿತ್ರಕ್ಕಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here