ಲೈಟಾಗಿ ಲವ್ವಾಗಿದೆ ಹಾಡುಗಳು ರಿಲೀಸ್ ಆಯ್ತು…

0
354

ಗುರುರಾಜ್ ಗದಾಡಿ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಲೈಟಾಗಿ ಲವ್ವಾಗಿದೆ ಮೂವಿಯ ಟೀಸರ್ ನ್ನು ಈಗಾಗಲೇ ಬಿಡುಗಡೆ ಮಾಡಿದ ಚಿತ್ರತಂಡ ಈಗ ಆಡಿಯೋ ರಿಲೀಸ್ ಮಾಡಿದೆ. ರಾಜಕುಮಾರ ಚಿತ್ರದ ನಿರ್ದೇಶಕರಾದ ಆನಂದ್ ರಾಮ್ ಅವರು ಚಿತ್ರದ ಧ್ವನಿ ಸುರಳಿಯನ್ನು ಬಿಡುಗಡೆಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರು. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಆಕಾಶ್ ಪರ್ವ ಸಂಗೀತ ನೀಡಿದ್ದಾರೆ. ಚೆನ್ನಪ್ಪ ನಾಯಕನಾಗಿ ದಿವ್ಯ ವಾಗುಕರ್ ನಾಯಕಿಯಾಗಿ ನಟಿಸಿದ್ದಾರೆ ಮತ್ತು ಸಚಿನ್ ತಮ್ಮಯ್ಯ ಜೊತೆ ಶ್ವೇತಾ ಧಾರಾವಾಡ ಅಭಿನಯಿಸಿದ್ದಾರೆ. ಈ ಚಿತ್ರವನ್ನು ಗುರುರಾಜ್ ಗದಾಡಿ ಜೊತೆಗೂಡಿ ಎನ್ ಆರ್ ರಜಪೂತ, ಕಿಶೋರ್ ಬಟ್ಟ್ ಮತ್ತು ಶಫೀಕ ಸನದಿ ನಿರ್ಮಾಣ ಮಾಡಿದ್ದಾರೆ. ಗೋಕಾಕ, ಸಂಕೇಶ್ವರ, ಕೊಪ್ಪಳ, ಬಾಗಲಕೋಟೆ ಬೆಂಗಳೂರು ಹಾಗೂ ಉತ್ತರ ಕರ್ನಾಟಕದ ಸುತ್ತ ಮುತ್ತ ಸ್ಥಳಗಳಲ್ಲಿ ಚಿತ್ರದ ಚಿತ್ರೀಕರಣವಾಗಿದೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ಸಂಜು ಬಸಯ್ಯ, ಅನ್ವಿತಾ, ದೇವುಕುಮಾರ್, ಯಲ್ಲೇಶ್‍ಕುಮಾರ್ ನಟಿಸಿದ್ದಾರೆ.


ಗುರುರಾಜ್ ಗದಾಡಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here