ವರ್ಧನ್ ಈಗ ಕ್ರಿಮಿನಲ್..!

0
572

ಹಫ್ತಾ ಚಿತ್ರದ ನಂತರ ವರ್ಧನ್ ಈಗ ದಾರಿ ಯಾವುದಯ್ಯಾ ವೈಕುಂಠಕ್ಕೆ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶ್ರೀ ಬಸವೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಶರಣಪ್ಪ ಎಂ ಕೊಟಗಿ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ಟೈಟಲ್ ಪೋಸ್ಟರ್ ಅನ್ನು ನಿರ್ದೇಶಕ-ನಟ ರಿಶಬ್ ಶೆಟ್ಟಿ ಅವರು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.
ಈ ಹಿಂದೆ ಕೃಷ್ಣ ಗಾರ್ಮೆಂಟ್ಸ್ ಚಿತ್ರವನ್ನು ನಿರ್ದೇಶನ ಮಾಡಿದ ಸಿದ್ದು ಪೂರ್ಣಚಂದ್ರ ಅವರು ಈ ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಬಗ್ಗೆ ನಾಯಕ ವರ್ಧನ್ “ಈ ಚಿತ್ರದಲ್ಲಿ ಆಕ್ಷನ್,ಹಾರರ್,ಕಾಮಿಡಿ,ಥ್ರೀಲ್ಲರ್ ಇರುವುದಿಲ್ಲ,ಹೊಸ ಜಾನರ್ ಇರುವ ಕಥೆ ಒಬ್ಬ ಕ್ರಿಮಿನಲ್ ವ್ಯಕ್ತಿಯನ್ನ ಭಾವನೆ ಮೂಲಕ ಕಟ್ಟಿಹಾಕಿದ್ದಾರೆ ಅವನು ಏನು ಆಗುತ್ತಾನೆ…? ಅವನ ಲೈಫ್ ಲಾಸ್ಟ್ ಅಲ್ಲಿ ಏನು ಆಗುತ್ತದೆ…? ಎಂಬುದು ಚಿತ್ರದ ಒಂದು ಲೈನ್ ಸ್ಟೋರಿ ಎಂದು ಹೇಳಿದ್ದರು”. ಚಿತ್ರದ ಪಾತ್ರಕ್ಕಾಗಿ ವರ್ಧನ್ ತಯಾರಿ ನಡೆಸಿದ್ದು, ತಮ್ಮ ದೇಹದ ತೂಕವನ್ನು 15 ಕೆ ಜಿ ಅಷ್ಟು ಕಡಿಮೆ ಮಾಡಿಕೊಡಿದ್ದಾರೆ.
ಚಿತ್ರದ ಚಿತ್ರೀಕರಣವನ್ನು ಬೆಂಗಳೂರು,ರಾಮನಗರದ ಸುತ್ತಮುತ್ತ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲ್ಲಿದ್ದು, ಇದೇ ತಿಂಗಳು ಚಿತ್ರದ ಚಿತ್ರೀಕರಣ ಶುರುಮಾಡಲು ಚಿತ್ರತಂಡ ತಯಾರಾಗುತ್ತಿದೆ. ತಿಥಿ ಖ್ಯಾತಿಯ ಪೂಜಾ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಇನ್ನೂ ಉಳಿದ ಪಾತ್ರಗಳಲ್ಲಿ ಸ್ಪಂದನ, ಬಲರಾಜವಾಡಿ, ಕುಡುಕನ ಪಾತ್ರದಲ್ಲಿ ಅರುಣ ಮೂರ್ತಿ, ಸಿದ್ದಾರ್ಥ್, ಶಿವು, ಶಿಂಬ, ಹೆಚ್‍ಎಮ್‍ಟಿ ವಿಜಿ ಸೇರಿದಂತೆ ಬಹುತೇಕ ರಂಗಭೂಮಿ ಕಲಾವಿದರು ಅಭಿನಯಿಸುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here