ಸೆನ್ಸಾರ್ ಗೆ ಸಿದ್ದವಾಗಿದೆ ಶತಭಿಷ

0
241

ಶ್ರೀ ದುರ್ಗಿ ವಿಷ್ಟು ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಶತಭಿಷ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಮುಗಿದಿದ್ದು ಈಗ ಸೆನ್ಸಾರ್ ಗೆ ಹೋಗಲು ಸಿದ್ದವಿದೆ. ವೆಂಕಟೇಶ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರದ ನಾಯಕನಾಗಿ ದೀಪು ಅರ್ಜುನ್ ನಟಿಸಿದ್ದು,ಇನ್ನೂ ಹೆಸರಿಡದ ಮತ್ತೊಂದು ಚಿತ್ರಕ್ಕೆ ದೀಪು ಅರ್ಜುನ್ ಸಹಿ ಮಾಡಿದ್ದಾರೆ.

ಶತಭಿಷ ಚಿತ್ರಕ್ಕೆ ಅಭಿಶೇಕ್ ಜಿ ರಾಯ್ ಸಂಗೀತ ನೀಡಿದ್ದು, ವಿರಾಜ್‍ಪೇಟೆ, ಕೂರ್ಗ್, ತಮಿಳುನಾಡು, ರಾಮನಗರ, ಹೊಸೂರು, ಚಿಕ್ಕಮಗಳೂರು, ಬೆಂಗಳೂರು ಸ್ಥಳಗಳಲ್ಲಿ ಚಿತ್ರೀಕರಣವಾಗಿದೆ.
ತಂಗಪಾಂಡಿಯನ್ ಛಾಯಗ್ರಹಣ, ಧನುಷ್ ಎಲ್ ಬೇದ್ರೆ ಸಂಕಲನ ಚಿತ್ರಕ್ಕಿದೆ. ಶೋಭಿತ ಶಿವಣ್ಣ ನಾಯಕಿಯಾಗಿ ಅಭಿನಯಿಸಿದ್ದಾರೆ.
ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಎರಡು ವಿಡಿಯೋ(ಲಿರಿಕಲ್) ಹಾಡುಗಳು ಯುಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here