ಹಳ್ಳಿ ಸೊಗಡಿನ ರಾಜಲಕ್ಷ್ಮಿ

0
748

ಕೆ ಎಂ ಮೂವಿಸ್ ಬ್ಯಾನರ್‌ನಲ್ಲಿ ಮೋಹನ್‌ಕುಮಾರ್ ನಿರ್ಮಾಣದ ರಾಜಲಕ್ಷ್ಮಿ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದ್ದು ಆಡಿಯೋ ರಿಲೀಸ್ ಮಾಡಲು ಚಿತ್ರತಂಡ ತಯಾರಾಗುತ್ತಿದೆ. ಕಾಂತ್‌ರಾಜ್ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿದೇಶನ ಮಾಡಿದ್ದಾರೆ.
ಚಿತ್ರದ ಬಗ್ಗೆ ಕಾಂತ್‌ರಾಜ್ ರವರು ನಮಗೆ ಹೇಳಿದ್ದು “ನನ್ನ ನಿರ್ದೇಶನದ ಮೊದಲ ಚಿತ್ರವಾಗಿದ್ದು, ಚಿತ್ರದಲ್ಲಿ ಲವ್ ಸ್ಟೋರಿಯು ಇದೆ ಮತ್ತು ಸುಂದರವಾಗಿರುವಂತ ಊರು ಸ್ವಾರ್ಥಿಗಳಿಂದ ಊರಿನ ಶಾಂತಿ ಆಳಾಗುತ್ತದೆ, ಮತ್ತೇ ಊರು ಹೇಗೆ ಸರಿಯಾಗುತ್ತದೆ..? ಎಂಬುದೇ ಚಿತ್ರದ ಒಂದು ಲೈನ್ ಸ್ಟೋರಿ” ಎಂದರು.

ದುಪ್ಟಟ್ಟು ಮಿನ್ನಗು (ತೆಲುಗು), ಅಂಧಗಾರ, ಬರಗಾಲ ಚಿತ್ರದಲ್ಲಿ ನಟಿಸಿರುವ ರಂಗಭೂಮಿ ಕಲಾವಿದನಾಗಿರುವ ನವೀನ್ ತೀರ್ಥಹಳ್ಳಿ ಚಿತ್ರದ ನಾಯಕನಾಗಿ ನಟಿಸಿದ್ದಾರೆ.

software ಇಂಜಿನಿಯರ್ ಆಗಿರುವ ರಶ್ಮಿಗೌಡ ನಾಯಕಿಯಾಗಿ ನಟಿಸಿದ್ದಾರೆ. ಈಗಾಗಲೇ ಜೊತೆಯಾಗಿ,ಮಿಂಚುಹುಳ ಚಿತ್ರದಲ್ಲಿ ನಟಿಸಿದ್ದಾರೆ.ಚಿತ್ರದಲ್ಲಿ 5 ಹಾಡುಗಳಿದ್ದು, ಎ ಟಿ ರವೀಶ್‌ರವರು ಸಂಗೀತ ನೀಡಿದ್ದಾರೆ.
ಚಿತ್ರವನ್ನು ಮಂಡ್ಯ, ಮೈಸೂರು, ರಾಮನಗರ, ಮೇಲುಕೋಟೆ, ಮದ್ದೂರು ಮತ್ತು ಬೆಂಗಳೂರು ಮುಂತಾದ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. ಪ್ರಮುಖ ಪಾತ್ರದಲ್ಲಿ ಹೊನ್ನವಳ್ಳಿ ಕೃಷ್ಣ, ಟೆನೇಶ್ ಕೃಷ್ಣ ಜೊತೆಗೆ ಮಜಾಭಾರತ ಚಂದ್ರ ಫ್ರಭು, ಕಾಮಿಡಿ ಕಿಲಾಡಿಯ ಸದಾನಂದ, ನವೀನ್, ಮೌಲ ಮತ್ತು ವಿ¯ನ್ ಪಾತ್ರಗಳಲ್ಲಿ ಮೀಸೆ ಮೂರ್ತಿ, ಕಿರಣ್ ಗೌಡ, ಉಮೇಶ್, ಭರತ, ರಘು ನಟಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here