ಹೊಸಪ್ರತಿಭೆಗಳ ಸಿನಿಮಾ ನಮ್ ಕಥೆ ನಿಮ್ಮ ಜೊತೆ

0
1106

ಕೇಶವ ಡ್ರೀಮ್ಸ್ ಸಿನಿ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಹೊಸಬರು ಸೇರಿಕೊಂಡು ನಮ್ ಕಥೆ ನಿಮ್ಮ ಜೊತೆ ಎಂಬ ಸಿನಿಮಾವನ್ನು ಮಾಡಿದ್ದಾರೆ. ಚಿತ್ರವು ಇದೇ ಮಾರ್ಚ್ 13ರಂದು ಬಿಡುಗಡೆ ಆಗುತ್ತಿದೆ. ಚಿತ್ರಕ್ಕೆ ಕಥೆ-ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ದೀಪಕ್ ನಾಯಕರಾಗಿ ನಟಿಸಿದ್ದಾರೆ, ದೀಪಕ್ ಜೊತೆಗೆ ನಾರದಮುನಿ, ಸಂತೋಷ್,ಅಂಜಲಿ ಮತ್ತು ಸ್ವಪ್ನಾ ನಟಿಸಿದ್ದಾರೆ.ದಿವಂಗತ ನಟ-ನಿರ್ದೇಶಕ ಶಂಕರ್ ನಾಗ್ ಅವರಿಂದ ಸ್ಪೂರ್ತಿ ಪಡೆದ ಕಥೆಯು ಎಂಬ ಸೀಕ್ರೆಟ್ ಅನ್ನು ಚಿತ್ರತಂಡ ಬಿಟ್ಟು ಕೊಟ್ಟಿಲ್ಲ. ಆದರೆ ಅವರ ಸಾವಿಗೆ ಸಂಬಂಧಿಸಿದ ಕಥೆ ಎಂದು ಚಿತ್ರತಂಡ ಹೇಳಿದೆ.

“ಮೂರು ಹುಡುಗರು ಇಂಜಿನಿಯರ್ ಮುಗಿಸಿದ ನಂತರ ಕೆಲಸಕ್ಕೆ ಸೇರಲು ಹೋಗುತ್ತಾರೆ ಕೆಲವರು ಕೆಲಸ ಕೊಡುಸುತ್ತಿನಿ ಎಂದು ಮೋಸ ಮಾಡುತ್ತಾರೆ, ಮುಂದೆ ಹುಡುಗರು ತಾವೇ ಒಂದು ಕಂಪನಿ ಮಾಡುತ್ತಾರೆ. ಈ ಕಂಪನಿಯಿಂದ ಸಮಾಜದ ಜನರಿಗೆ ತುಂಬಾ ಉಪಯೋಗವಾಗುವುದು”. ಜನರಿಗೆ ಉಪಯೋಗಬಾಗುವಂತಹ ಆ ಕಂಪನಿ ಯಾವುದು…? ಇದೇ ಚಿತ್ರದ ಒಂದು ಲೈನ್ ಸ್ಟೋರಿ. ಅಲ್ಲದೆ ಈಗಿನ ಮಕ್ಕಳು ತಂದೆ-ತಾಯಿಗಳಿಗೆ ಹೇಗೆಲ್ಲ ಸುಳ್ಳು ಹೇಳಿ ಹಣ ಪಡೆಯುತ್ತಾರೆ ಎಂಬ ಕಥೆಯು ಚಿತ್ರದಲ್ಲಿ ಇದೆಯಂತೆ.

ಚಿತ್ರದಲ್ಲಿ ಮೂರು ಹಾಡುಗಳಿದ್ದು, ಸುನೀಲ್ ಶಂಕರ್ ಸಂಗೀತ ಸಂಯೋಜನೆ,ಆರ್ಯನ್ ರೋಶನ್ ನೃತ್ಯ ನಿರ್ದೇಶನ ಚಿತ್ರಕ್ಕಿದೆ. ಬೆಂಗಳೂರು ಮತ್ತು ಚಿಕ್ಕಮಂಗಳೂರಿನ ಸುತ್ತ-ಮುತ್ತ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ.ಹೊಸಬರ ಈ ಸಿನಿಮಾಗೆ ನಮ್ಮ ಕಡೆಯಿಂದ ಆಲ್ ದಿ ಬೆಸ್ಟ್.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here