ಮಂಗಳವಾರ ರಜಾದಿನದ ಹಾಡು ರಿಲೀಸ್

0
434

ಹಲವು ಚಿತ್ರಗಳಿಗೆ ಸಂಭಾಷಣೆ ಬರೆದು ಸಹ ನಿರ್ದೇಶಕನಾಗಿ ಕೆಲಸ ಮಾಡಿದ ಯುವಿನ್ ಎಂಬ ಯುವ ನಿರ್ದೇಶಕ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಚಿತ್ರ ಒಂದನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರದ ಹೆಸರೇ ಮಂಗಳವಾರ ರಜಾದಿನ, ಈ ಚಿತ್ರದ ನಾಯಕನಾಗಿ ಬಿಗ್ ಬಾಸ್ ಖ್ಯಾತಿಯ ಚಂದನ್ ಆಚಾರ್ ನಟಿಸಿದ್ದಾರೆ. ತ್ರಿವರ್ಗ ಫಿಲಂಸ್ ಬ್ಯಾನರ್ ನಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಚಂದನ್ ಆಚಾರ್ ಕ್ಷೌರಿಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಜೊತೆಗೆ ಲಾಸ್ಯ ನಾಗರಾಜ್, ಗೋಪಾಲಕೃಷ್ಣ ದೇಶಪಾಂಡೆ, ಜಹಂಗೀರ್, ನಂದನ್ ರಾಜ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
ಚಿತ್ರದ ಶೀರ್ಷಿಕೆ ವಿಭಿನ್ನವಾಗಿರುವುದರಿಂದ ನಿರ್ದೇಶಕರನ್ನು ಕೇಳಿದಾಗ ಚಿತ್ರದ ಕಥೆಯನ್ನು ಬಿಟ್ಟು ಕೂಡದೆ ಅವರು ಹೇಳಿದ್ದು ಚಿತ್ರದ ಟೈಟಲ್‍ನಲ್ಲೇ ಕಥೆ ಇದೆ ಸಿನಿಮಾವನ್ನು ನೋಡಿದ ನಂತರ ಕಥೆಗೂ Title ಗು ಇರುವ ಸಂಬಂಧ ಗೂತ್ತಾಗುತ್ತದೆ ಎಂದು ಹೇಳುತ್ತ ಹಾಗೆಯೇ ಈ ಚಿತ್ರ ಹಾಸ್ಯಭರಿತದಿಂದ ಕೂಡಿದು ಫ್ಯಾಮಿಲಿ ಕುಳಿತು ಕೂಂಡು ನೋಡಬಹುದಾದ ಕಥೆಯಿದೆ ಎಂದು ಯುವಿನ್ ಹೇಳಿದರು.

ಚಿತ್ರದ ಚಿತ್ರೀಕರಣವನ್ನು ಬೆಂಗಳೂರು ಸುತ್ತಮುತ್ತ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. ಋತ್ವಿಕ್ ಮುರುಳಿಧರ್ ಚಿತ್ರಕ್ಕೆ ಹಿನ್ನಲೆ ಸಂಗೀತ ನೀಡಿದ್ದಾರೆ. ಉದಯ್ ಲೀಲಾ ಅವರ ಕ್ಯಾಮರ ಕೈಚಾಲಕ ಚಿತ್ರಕ್ಕಿದ್ದು,ಮಧುತುಂಬಕೆರೆ ಅವರ ಸಂಕಲನ ಚಿತ್ರಕ್ಕಿದೆ. ಚಿತ್ರಕ್ಕೆ ಪ್ರಜೋತ್ ಡೇಸ್ ಸಂಗೀತ ನೀಡಿದ್ದು ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳು ಇವೆ. ನವೀನ್ ಸಜ್ಜು ಹೊಸ ಶೈಲಿಯಲ್ಲಿ ಹಾಡಿರುವ Koole (ಕೂಳೆ)… ಎಂಬ ಹಾಡನ್ನು ಯು ಟ್ಯೂಬ್‍ನಲ್ಲಿ ಚಿತ್ರತಂಡ ಬಿಡುಗಡೆ ಮಾಡಿದೆ.ಈ ಹಾಡಿನಲ್ಲಿ ವಿಶೇಷವಾದ ಕಾರು ಗಮನ ಸಳೆಯುತ್ತದೆ.
                             ಯುವಿನ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here