A ಹೆಸರಿನ ಮತ್ತೊಂದು ಚಿತ್ರ ಇದು ಧಮ್ ಇದ್ದವರಿಗೆ ಮಾತ್ರ…

0
786

ರಾಘವಚಂದ್ರ ಪ್ರೊಡಕ್ಷನ್‍ನಲ್ಲಿ ಯುವ ನಿರ್ದೇಶಕ ರಾಘವ ಚಂದ್ರ ಕಥೆ-ಚಿತ್ರಕಥೆ ಬರೆದು ನಿರ್ಮಾಣ ನಿರ್ದೇಶನ ಮಾಡುತ್ತಿರುವ ಚಿತ್ರವು ಬಿಡುಗಡೆಗೆ ತಯಾರಾಗಿದೆ. ಸಸ್ಪೆನ್ಸ್, ಥ್ರಿಲ್ಲರ್,ಹಾರರ್ ಜೊತೆಗೆ ಲವ್ ಸ್ಟೋರಿ ಇರುವ ಈ ಚಿತ್ರದ ಟ್ಯಾಗ್‍ಲೈನ್ ಧಮ್ ಇದ್ದವರಿಗೆ ಮಾತ್ರ ಎಂದು ಇದೆ.
ಹೆಣ್ಣು ಮಕ್ಕಳ ಮೇಲಷ್ಟೆ ಅತ್ಯಾಚಾರಗಳು ನಡೆಯುತ್ತಿಲ್ಲ, ಗಂಡು ಮಕ್ಕಳ ಮೇಲು ನಾನಾ ರೀತಿಯಲ್ಲಿ ಅತ್ಯಾಚಾರ ನಡೆಯುತ್ತಿದೆ…!
ಗಂಡು ಹುಡುಗರ ಮೇಲಾಗುತ್ತಿರುವ ಅತ್ಯಾಚಾರದಂತ ದೌರ್ಜನ್ಯ ಹಾಗೂ ಅವರ ಕಷ್ಟಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ ಮತ್ತು ನೈಜ ಘಂಟನೆಯ ಆಧಾರದ ಮೇಲೆ ಈ ಚಿತ್ರ ಮಾಡಲಾಗಿದೆ ಎಂದು ನಿರ್ದೇಶಕರು ಹೇಳಿದರು.

ಚಿತ್ರದ ಟ್ರೇಲರ್ ಈಗಾಗಲೇ ಬಿಡುಗಡೆಯಾಗಿದ್ದು ಸೋಶಿಯಲ್ ಮೀಡಿಯದಲ್ಲಿ ಸೌಂಡ್ ಮಾಡುತ್ತಿದೆ. ಚಿತ್ರದ ಚಿತ್ರೀಕರಣವನ್ನು ಬೆಂಗಳೂರು, ಮೈಸೂರು ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. ವಿಜೆ ಸಂಗೀತ, ಅರುಣಸುರೇಶ್ ಛಾಯಗ್ರಹಣ, ಶ್ರೀಕಾಂತ್ ಸಂಕಲನ, ಅರಗಿಣೆ ಸಂಭಾಷಣೆ ಚಿತ್ರಕ್ಕಿದೆ. ರಾಜೀವ್ ಕೊಠಾರಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಚಿತ್ರದಲ್ಲಿ ಹಾಡುಗಳು ಮತ್ತು ಫೈಟ್‍ಗಳು ಇಲ್ಲವಂತೆ. ಚಿತ್ರದಲ್ಲಿ ರಾಘವ ಸೂರ್ಯ, ರಚನ ದಶರಥ, ಸವಿತ, ಸ್ವಾತಿ, ಸುಮಿತ್ರಾ, ರಚನಗೌಡ ನಟಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here