ಹಿಸ್ಟರಿಕಲ್,ಕಾಮಿಡಿ,ಮಾಸ್,ಸಸ್ಪನ್ಸ್,ಹಾರಾರ್,ಸೈಕಾಲಜಿಕಲ್ ಥ್ರೀಲರ್,ಲವ್ ಈಗೆ ಎಲ್ಲಾ ಎಲಿಮೆಟ್ಸ್ ಇರುವ ಯುವ ನಿರ್ದೇಶಕ ಪ್ರಬಿಕ್ ಮೋಗವೀರ್ ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವ ಗಡಿಯಾರ ಸಿನಿಮಾ ಬರುತ್ತಿದೆ. “ಪ್ರಸಿದ್ದ ರಾಜಮನೆತನಗಳ ಗೊತ್ತಿರದ ಸೀಕ್ರೆಟ್ಗಳನ್ನು ಮತ್ತು ಕನಕಪುರದಲ್ಲಿ ನಡೆದಂತಹ ನೈಜ ಘಂಟನೆಯ ಸ್ಟೋರಿಯ ಜೊತೆಗೆ ಮೂರು ಮುಖ್ಯ ಕಥೆಗಳಲ್ಲಿ ಹತ್ತಕ್ಕೂ ಉಪಕಥೆಗಳನ್ನು ಚಿತ್ರದಲ್ಲಿ ನೋಡಬಹುದು ಹಾಗೂ ರಿವರ್ಸ್ Screen Play ಇರುವ ಪಕ್ಕ ಕಮರ್ಷಿಯಲ್” ಮೂವಿ ಎಂದು ನಿರ್ದೇಶಕರು ಹೇಳಿದರು.
ಚಿತ್ರಕ್ಕೆ ರಾಘವ್ ಸುಭಾಷ್ ಸಂಗೀತ ಸಂಯೋಜನೆ ಮಾಡಿದ್ದು, ಹೈಟ್ ಮಂಜು ನೃತ್ಯ ನಿರ್ದೇಶನ ಮಾಡಿದ್ದಾರೆ. ಚಿತ್ರದ ವಿಶೇಷ ಹಾಡೂಂದಕ್ಕೆ ಬೆಂಗಾಲಿ ನಟಿ “ದಭಾಂಗನ ಚೌದರಿ” ಹೆಜ್ಜೆ ಹಾಕ್ಕಿದ್ದಾರೆ. ಚಿತ್ರದ ಮುಖ್ಯ ಪಾತ್ರಗಳಲ್ಲಿ ರಾಜ್ ದೀಪಕ್ ಶೆಟ್ಟಿ, ಶೀತಲ್ ಶೆಟ್ಟಿ ಹಾಗೂ ಪೋಷಕ ಪಾತ್ರದಲ್ಲಿ ಶರತ್ ಲೋಹಿತಾಶ್ವ ಮತ್ತು ಸುಚೇಂದ್ರ ಪ್ರಸಾದ್ ನಟಿಸಿದ್ದಾರೆ. ಎಸ್ ಪಿ ಸಾಂಗ್ಲಿಯಾನ ಅವರು ವಿಶೇಷ ಪಾತ್ರದಲ್ಲಿ ನಟಿಸಿದ್ದು, ಅತಿಥಿ ಪಾತ್ರಗಳಲ್ಲಿ ಮಲಯಾಳಂನ ನಟ “ರಿಹಾಜ್ ಎಮ್ ಟಿ” ಹಾಗೂ ಹಿಂದಿಯ “ಗೌರಿ ಶಂಕರ್” ಕಾಣಿಸಿಕೊಂಡಿದ್ದಾರೆ ಜೊತೆಗೆ ಮನದೀಪ್ ರಾಯ್, ರಾಧರಾಮಚಂದ್ರ, ಗಣೇಶ್ ರಾವ್, ಪ್ರದೀಪ್ ಪೂಜಾರಿ, ಪ್ರಣಯ್ ಮೂರ್ತಿ, ಡಿಸಿಪಿ ಚಬ್ಬಿ ಅಭಿನಯಿಸಿದ್ದಾರೆ.
ಎನ್ ಎಮ್ ವಿಶ್ವ ಸಂಕಲನ, ಶ್ಯಾಮ್ ಹಾಗೂ ಹೇಮಂತ್ ಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ.ಥ್ರೀಲರ್ ಮಂಜು ಅವರು ಸಾಹಸ ನಿರ್ದೇಶನ ಮಾಡಿದ್ದು, ಚಿತ್ರದಲ್ಲಿ ನಾಲ್ಕು ಫೈಟ್ಗಳಿವೆ. ಇತರೆ ಪಾತ್ರಗಳಲ್ಲಿ ಸಂತೋಷ್ , ವಿನಯ್ ರಾವ್ , ಲೀಲಾಮೋಹನ್ , ದೇವರಾಜ್,ಸ್ಪೂರ್ತಿ,ಶರ್ಮಿತ,ಸುರಕ್ಷಿತ,ಸಚಿನ,ಸಂಕಲ್ಪ ಮುಂತಾದವರು ಇದ್ದರೆ.
ಪ್ರಬಿಕ್ ಮೋಗವೀರ್