GANESHA Festival…

0
672

      ಬೆಂಗಳೂರಿನ HSR Layout 7th Sector ನಲ್ಲಿ ಇರುವ ಶ್ರೀ ವರಸಿದ್ದ ವಿನಾಯಕ ದೇವಸ್ಥಾನದಲ್ಲಿ “ಗಣೇಶ ಚತುರ್ಥಿ” ಬಹಳ ವಿಜಂಬೃಣೆಯಿಂದ ಆಚರಿಸಲಾಯಿತು. ಬಡಾವಣೆಯ ಜನರು ದೇವಸ್ಥಾನಕ್ಕೆ ಬಂದು ಪೂಜಿಸಲಿಸಿ ಭಕ್ತಿಯಿಂದ ಸಂಭ್ರಮಿಸಿದ್ದರು. ಗಣೇಶ ಹಬ್ಬದ ಪ್ರಯುಕ್ತ “ಶ್ರೀ ವರಸಿದ್ದ ವಿನಾಯಕ ಸೇವಾ ಸಂಘ”ದವರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.

ದೇವಸ್ಥಾನದ ಸೇವಾ ಸಂಘದ ಅಧ್ಯಕ್ಷರು “ಸುದ್ದಿನೋಟ”ದೊಂದಿಗೆ ಹಬ್ಬದ ಕಾರ್ಯಕ್ರಮದ ಬಗ್ಗೆ ಹೇಳಿದು ಹೀಗೆ  “ಗಣೇಶ ಹಬ್ಬದ ಸಲುವಾಗಿ ಪ್ರತೇಕವಾಗಿ ಗಣಪತಿಯನ್ನು ಸ್ಥಾಪಿಸಿ ಪೂಜೆ ಪೂರಸ್ಕರ ಮಾಡಿ ಮೊದಲ ಮತ್ತು ಎರಡನೆಯ ದಿನ ಸಂಜೆ ವೇಳೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು  ಏರ್ಪಡಿಸಿ,  ಮೂರನೇ ದಿನ ” ಗಣಪತಿ ಉಪನಿಷತ್ ಹೋಮ”ವನ್ನು ಬಡಾವಣೆಯ ಎಲ್ಲಾ ನಾಗರೀಕರ ಕ್ಷೇಮಭಿವೃಧಿಗಾಗಿ ನೇರವೇರಸಲಾಗುತ್ತದೆ,ನಂತರ ಪ್ರತಿ ವರ್ಷದಂತೆ ಮಹಾಪ್ರಸಾದ ವಿನಿಯೋಗ ಮಾಡಲಾಗುತ್ತದೆ ” ಎಂದರು.

25/08/17 ರಂದು  ಸಂಗೀತ ವಿದ್ಯಾನಿಧಿ ಡಾ. ವಿದ್ಯಾಭೊಷಣ ಮತ್ತು ಸಂಗಡಿಗರಿಂದ ಹರಿದಾಸ ಕೀರ್ತನೆಗಾಯನ ವಿತ್ತು.

26/08/17 ರಂದು ಆರ್ಯಭಟ್ಟ ಯಶಸ್ವಿ ಪುರಸ್ಕೃತರಾದ ವಿದೂಷಿ “ಇಂದೂ ನಾಗರಾಜ್” ಮತ್ತು ವಿದೂಷಿ “ಲಕ್ಷ್ಮೀ ನಾಗರಾಜ್” ಇವರುಗಳಿಂದ ಸುಗಮ ಸಂಗೀತ, ಭಾವಗೀತೆಯನ್ನು ಏರ್ಪಡಿಸಲಾಯಿತು ಇದರ ಜೊತೆಗೆ ಬಡಾವಣೆಯ ಕಲಾವಿದರು ಕೂಡ ಕಾರ್ಯಕ್ರಮ ನೀಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here