K-QUBE ಡಿಜಿಟಲ್ ಸೇವಾ ಕೇಂದ್ರ

0
1292

K-QUBE ಡಿಜಿಟಲ್ ಸೇವಾ ಕೇಂದ್ರ
ಶಿಕಾರಿಪುರ ತಾಲ್ಲೂಕಿನ ತಡಗಣಿ ಪಂಚಾಯತ್ ವ್ಯಾಪ್ತಿಯ ಏಕಿUಃಇ ಡಿಜಿಟಲ್ ಸೇವಾ ಕೇಂದ್ರವನ್ನು ಉಧ್ಘಾಟಿಸಿ ಮಾನವ ಹಕ್ಕು ಅಧ್ಯಕ್ಷರಾದ ಶಕ್ತಿಪಾಟೀಲ್‍ರವರು ಶುಭಹಾರೈಸಿದ್ದಾರು. ಈ ಕಾರ್ಯಕ್ರಮಕ್ಕೆ ಉಪಧ್ಯಕ್ಷರಾದ Kiran G B, ಕಾರ್ಯದರ್ಶಿಗಳಾದ Vinay Kumar M, ಸದಸ್ಯರುಗಳಾದ ಉಮೇಶ್ ಅವಾಜಿ, ಮಹೇಶ್ ಮುಂತಾದವರು ಮತ್ತು ತಡಗುಣಿ ಗ್ರಾಮಸ್ಥರು ಇದ್ದರು.

ಡಿಜಿಟಲಿಕರಣವಾಗುತ್ತಿರುವ ತಡಗಣಿ ಗ್ರಾಮ ಮತ್ತು K-QUBE ನ ಉಪಯೋಗಗಳು. .
ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾದ ಮಹತ್ವದ ಯೋಜನೆಯಾದ ಸಾಮಾನ್ಯ ಸೇವಾ ಕೇಂದ್ರವನ್ನು “ಕೆ ಕ್ಯೂಬ್ ಡಿಜಿಟಲ್ ಜೋನ್” ನಲ್ಲಿ ಆರಂಭಿಸಲಾಯಿತು. ಗ್ರಾಮೀಣ ಜನರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಎಲ್ಲಾ ಸೌಲಭ್ಯಗಳು ನೇರವಾಗಿ ಬೆರಳ ತುದಿಯಲ್ಲಿ ಸಿಗುವಂತೆ ಮಾಡುವುದರ ಜೊತೆಗೆ ಅರೆ ಸರ್ಕಾರಿ, ಖಾಸಗಿ, ಬ್ಯಾಂಕಿಂಗ್, ಕೃಷಿ, ಸಂಭಂದಿ ನೂರಾರು ಸೇವೆಗಳು ಸರಳವಾಗಿ ಸಮೀಪದಲ್ಲೇ ಒದಗಿಸುವುದರೊಂದಿಗೆ ಉದ್ಯೋಗವನ್ನೂ ಸೃಜಿಸುವದು ಈ ಯೋಜನೆಯ ಉದ್ದೇಶವಾಗಿದೆ.
ನೂತನವಾಗಿ ಆರಂಭಿಸಿದ ಸಾಮಾನ್ಯ ಸೇವಾ ಕೇಂದ್ರ ‘ಕೆ ಕ್ಯೂಬ್ ಡಿಜಿಟಲ್ ಜೋನ್’ ದ ಉಧ್ಘಾಟನೆಯನ್ನು ಶ್ರೀಯುತ ಶಕ್ತಿ ಪಾಟೀಲ್, ಅಧ್ಯಕ್ಷರು, ಮಾನವ ಹಕ್ಕುಗಳು ಮತ್ತು ಭೃಷ್ಠಾಚಾರ ವಿರೋಧಿ ಸಂಸ್ಥೆ, ಇವರ ಶುಭಹಸ್ತದಿಂದ ನೆರವೇರಿಸಲಾಯಿತು. ಈ ಸಂಧರ್ಭದಲ್ಲಿ ಶ್ರೀ ಶಕ್ತಿ ಪಾಟೀಲ್ ಇವರು ಗ್ರಾಮದ ಜನರಿಗೆ ಸರಳ, ಸುಲಭವಾಗಿ ಉತ್ತಮ ಸೇವೆಗಳನ್ನು ಒದಗಿಸಿ ಪಟ್ಟಣದ ಮೇಲಿನ ಅವಲಂಬನೆಯನು ಕಡಿಮೆಗೊಳಿಸಿ ಗ್ರಾಮೀಣ ಜನರಿಗೆ ನೆರವಾಗುವಂತೆ ಸಲಹೆಯನ್ನು ನೀಡಿದರು. ಈ ಶುಭ ಘಳಿಗೆಯಲ್ಲಿ ಹಲವು ಸ್ಥಳೀಯ ಗಣ್ಯಮಾನ್ಯರು, ಗ್ರಾಮದ ಜನರು ಉಪಸ್ಥಿತರಾಗಿ, ಕೇಂದ್ರದ ಮುಖ್ಯಸ್ಥರಾದ ಶ್ರೀ ಕೃಷ್ಣಮೂರ್ತಿ ರವರಿಗೆ ಶುಭವನ್ನು ಕೋರಿದರು.
ಅತೀ ಶೀಘ್ರದಲ್ಲಿ ‘ಕೆ ಕ್ಯೂಬ್ ಡಿಜಿಟಲ್ ಜೋನ್’ ಅಡಿಯಲ್ಲಿ ಗ್ರಾಮೀಣ ಜನರಿಗಾಗಿ ಕೌಶಲ್ಯ ತರಬೇತಿ ಆರಂಭಿಸಿ ನಿರುದ್ಯೋಗಿ ಯುವ ಜನತೆಗೆ ಸ್ವಂತ ಉದ್ಯೋಗದಲ್ಲಿ ತೊಡಗಿಕೊಳ್ಳುವಂತೆ ಪ್ರೋತ್ಸಾಹಿಸುವ ಉದ್ದೇಶ ಹೊಂದಿರುವುದಾಗಿ ಶ್ರೀ ಕೃಷ್ಣಮೂರ್ತಿ ರವರು ವಿವರಿಸಿದರು.
ಪಾಸ್ ಪೋರ್ಟ್, ಪ್ಯಾನ್ ಕಾರ್ಡ್ ನಂತಹ ಸೇವೆಯ ಜೊತೆಗೆ ಎಲ್ಲಾ ರೀತಿಯ ವಿಮೆ ಸೌಲಭ್ಯ, ಬ್ಯಾಂಕಿಂಗ್: ಹಣ ವಹಿವಾಟು, ರೇಷನ್ ಕಾರ್ಡ್ , ಆಧಾರ್ ಕಾರ್ಡ್, ಜಾತಿ-ಆದಾಯ ಪ್ರಮಾಣ ಪತ್ರದಂತಹ ನೂರಾರು ಸೇವೆಗಳಿಗಾಗಿ ಗ್ರಾಮೀಣ ಜನರು ಸಾಮನ್ಯ ಸೇವಾ ಕೇಂದ್ರವನ್ನು ಸಂಪರ್ಕಿಸಿ ಇದರ ಸದುಪಯೋಗ ಪಡೆದುಕೊಳ್ಳ ಬಹುದು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here