Valentine’s Day ಗೆ ತ್ರಿವಿಕ್ರಮನ ಹೊಸ ಥೀಮ್

0
216

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಗ ವಿಕ್ರಮ್ ಅಭಿನಯದ ತ್ರಿವಿಕ್ರಮ ಚಿತ್ರತಂಡ ಫೆಬ್ರವರಿ 14 ಪ್ರೇಮಿಗಳ ದಿನದ ಪ್ರಯುಕ್ತ ಒಂದು ವಾರ ಪ್ರೇಮೋತ್ಸವವನ್ನು ಆಚರಿಸುತ್ತಿದೆ. ಅಂದರೆ ಫೆ 7ರಿಂದ ಫೆ 14ನೇ ವರೆಗೂ ಒಂದೊಂದು ದಿನ ಒಂದೊಂದು ಹೊಸ ಥೀಮ್ ಪೋಸ್ಟರ್ ರಿಲೀಸ್ ಮಾಡುತ್ತ ಪ್ರೇಮಿಗಳ ಗಮನಸೆಳೆಯುತ್ತಿದೆ.
ಆ ಥೀಮ್‍ಗಳು ಈಗಿವೆ… ಫೆಬ್ರವರಿ 7ರಂದು ರೋಸ್ ಡೇ, ಫೆ 8 ಪ್ರಪೋಸ್ ಡೇ, ಫೆ9 ಚಾಕೋಲೇಟ್ ಡೇ,ಫೆ 10 ಟೆಡ್ಡಿ ಡೇ, ಫೆ 11 ಪ್ರಾಮೀಸ್ ಡೇ, ಫೆ12 ಕಿಸ್ ಡೇ, ಫೆ13 ಹಾಗೂ ಫೆ14 ವ್ಯಾಲೆಂಟನ್ಸ್ ಡೇ. ಈ ರೀತಿ ಪ್ರೇಮಿಗಳ ದಿನವನ್ನು ತ್ರಿವಿಕ್ರಮ ಆಚರಿಸುತ್ತಿದ್ದಾನೆ. ಪೋಸ್ಟರ್ ಗಳಲ್ಲಿ ಚಿತ್ರದ ನಾಯಕ ವಿಕ್ರಮ್ ರವಿಚಂದ್ರನ್ ನಾಯಕಿ ಆಕಾಂಕ್ಷ ಶರ್ಮ ಹಾಗೂ ಚಿಕ್ಕಣ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರೀಕರಣ ಹಂತದಲ್ಲಿರು ಈ ಚಿತ್ರವನ್ನು ಸೋಮಣ್ಣ ನಿರ್ಮಾಣ ಮಾಡುತ್ತಿದ್ದು, ಸಹನಾ ಮೂರ್ತಿ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ, ಸಂತೋಷ್ ರೇ ಪಾತಾಜೆ ಛಾಯಗ್ರಹಣ ಚಿತ್ರಕ್ಕಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here